ಕರ್ನಾಟಕ

karnataka

ವಯಸ್ಸು ಆರು - ಸಾಧನೆ ಹತ್ತಾರು.. ಟೇಕ್ವಾಂಡೋ ಕ್ರೀಡೆಯಲ್ಲಿ ಒಲಿಂಪಿಕ್ ಆಡುವ ಕನಸು ಹೊತ್ತ ಪುಟಾಣಿ ಅವಳಿಗಳು

ಕಾವ್ಯ ಈಗಾಗ್ಲೇ ರಾಷ್ಟ್ರಮಟ್ಟದ ಜೂನಿಯರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಹ ಗೆದ್ದಿದ್ದು, ರಾಷ್ಟ್ರೀಯ ಚಾಂಪಿಯನ್​ಶಿಪ್​​​ಗೂ ಆಯ್ಕೆಯಾಗಿದ್ದಾಳೆ. ಮುಂದೊಂದು ದಿನ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬುದು ಪುಟಾಣಿಗಳ ಮಹದಾಸೆಯಂತೆ.

By

Published : May 7, 2021, 6:00 AM IST

Published : May 7, 2021, 6:00 AM IST

the-twins-dreaming-of-playing-the-olympic-in-taekwondo
ಟೇಕ್ವಾಂಡೋ ಕ್ರೀಡೆಯಲ್ಲಿ ಒಲಂಪಿಕ್ ಆಡುವ ಕನಸು ಹೊತ್ತ ಪುಟಾಣಿ ಅವಳಿಗಳು

ರಾಂಚಿ (ಜಾರ್ಖಂಡ್​): ಜಾರ್ಖಂಡ್​​​ ರಾಜಧಾನಿ ರಾಂಚಿಯಿಂದ 180 ಕಿಲೋ ಮೀಟರ್ ಸಾಗಿದರೆ ಸಿಗುವ ಗಿರಿಡಿಹ್ ಪ್ರದೇಶ ಶಿಖರ್ಜಿ ಜೈನ ದೇವಾಲಯ ಹಾಗೂ ಗಣಿಗಳಿಂದಲೇ ದೇಶದಲ್ಲಿ ಪ್ರಸಿದ್ಧಿಯಾಗಿದೆ. ಆದರೆ, ಇದೇ ಗ್ರಾಮದ ಇಬ್ಬರು ಅವಳಿ ಸಹೋದರಿಯರು ದೇಶದೆಲ್ಲೆಡೆ ಈಗ ಪರಿಚಿತರಾಗುತ್ತಿದ್ದಾರೆ. ಇಲ್ಲಿನ ಕಾವ್ಯ ಮತ್ತು ನವ್ಯಾ ಎಂಬ ಈ ಇಬ್ಬರು ಪುಟಾಣಿಗಳು ಟೇಕ್ವಾಂಡೋ ಕ್ರೀಡೆಯಲ್ಲಿ ಹೆಸರು ಮಾಡುತ್ತಿದ್ದಾರೆ.

ಆಟಿಕೆಗಳೊಂದಿಗೆ ಕಾಲ ಕಳೆಯುವ ವಯಸ್ಸಿನಲ್ಲಿ ಈ ಇಬ್ಬರು ಪುಟಾಣಿಗಳು ಟೇಕ್ವಾಂಡೋದಲ್ಲಿ ಪರಿಣತಿ ಪಡೆಯಬೇಕು ಅಂತ ಹಂಬಲಿಸಿದ್ದಾರೆ. ಕೇವಲ 6ನೇ ವಯಸ್ಸಿನಲ್ಲಿ ಇಬ್ಬರ ಹುಮ್ಮಸ್ಸು ಎಂತಹವರಿಗೂ ಅಚ್ಚರಿ ಉಂಟುಮಾಡುತ್ತೆ. ಇದಿಷ್ಟೇ ಅಲ್ಲ ಕಾವ್ಯ ಈಗಾಗ್ಲೇ ರಾಷ್ಟ್ರಮಟ್ಟದ ಜೂನಿಯರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಹ ಗೆದ್ದಿದ್ದು, ರಾಷ್ಟ್ರೀಯ ಚಾಂಪಿಯನ್​ಶಿಪ್​​​ಗೂ ಆಯ್ಕೆಯಾಗಿದ್ದಾಳೆ. ಮುಂದೊಂದು ದಿನ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬುದು ಪುಟಾಣಿಗಳ ಮಹದಾಸೆಯಂತೆ.

ಈ ಪುಟಾಣಿಗಳ ತಂದೆ ಪಂಕಜ್ ಕುಮಾರ್ ಸ್ವತಃ ಪಿಸ್ತೂಲ್​​​ ಶೂಟಿಂಗ್ ಆಟಗಾರರಾಗಿದ್ದಾರೆ.

ಟೇಕ್ವಾಂಡೋ ಕ್ರೀಡೆಯಲ್ಲಿ ಒಲಂಪಿಕ್ ಆಡುವ ಕನಸು ಹೊತ್ತ ಪುಟಾಣಿ ಅವಳಿಗಳು

ಈ ಅವಳಿ ಪುಟಾಣಿಗಳಲ್ಲಿ ಇನ್ನಿಲ್ಲದ ಉತ್ಸಾಹವಿದೆ. ಇಬ್ಬರು ಒಂದರ ನಂತರ ಒಂದರಂತೆ ಅನೇಕ ಪದಕಗಳನ್ನು ತಮ್ಮ ಹೆಸರಲ್ಲಿ ಪಡೆದಿದ್ದಾರೆ. ಮುಂದೆ ದೇಶಕ್ಕಾಗಿ ಆಡುವ ಹಂಬಲವಿದ್ದು, ಅಲ್ಲಿಯೂ ಪದಕ ಜಯಿಸಲು ಕಾಯುತ್ತಿದ್ದಾರೆ. ಆದರೆ, ಈ ಪುಟಾಣಿಗಳನ್ನ ಮಾಸ್ಟರ್​ ಆಗಿ ಮಾಡುವಲ್ಲಿ ತರಬೇತುದಾರನ ಪರಿಶ್ರಮ ಮೆಚ್ಚಬೇಕಿದೆ.

ಈ ಇಬ್ಬರೂ ಸಹೋದರಿಯರು ತಮ್ಮ ಕಠಿಣ ಪರಿಶ್ರಮದಿಂದ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಹೆಸರು ತರುತ್ತಿದ್ದಾರೆ. ಬಾಲಕಿಯರಿಬ್ಬರೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವ ದಿನಗಳು ದೂರವಿಲ್ಲ.

ABOUT THE AUTHOR

...view details