ನವದೆಹಲಿ:ಈ ಹಿಂದೆ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಹಲವಾರು ವ್ಯಕ್ತಿಗಳು ದೇಶದ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗಳಾಗಿದ್ದು, ಈ ವಿಷಯದಲ್ಲಿ ಬೇರೆ ದೇಶಗಳಿಂದ ಕಲಿಯುವಂಥದ್ದು ಏನೂ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ. ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದಂತೆ ಭಾರತವೂ ಅದೇ ಮಾರ್ಗದಲ್ಲಿ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದ ತನ್ನದೇ ಪಕ್ಷದ ನಾಯಕರಾದ ಪಿ. ಚಿದಂಬರಂ ಮತ್ತು ಶಶಿ ತರೂರ್ ಅವರ ಹೇಳಿಕೆಗಳನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ಎಐಸಿಸಿ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ವೈವಿಧ್ಯತೆಯನ್ನು ಗೌರವಿಸುವುದು ಹಲವು ವರ್ಷಗಳಿಂದ ಭಾರತದ ವಿಶಿಷ್ಟ ಲಕ್ಷಣವಾಗಿದೆ. ಹಲವಾರು ವರ್ಷಗಳ ಕಾಲ ದೇಶದ ಉನ್ನತ ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸಿದ್ದ ಜಾಕೀರ್ ಹುಸೇನ್, ಫಕ್ರುದ್ದೀನ್ ಅಲಿ ಅಹಮದ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.
ಭಾರತೀಯ ಮೂಲದ ಸುನಕ್ ಬ್ರಿಟನ್ ಪ್ರಧಾನಿಯಾದ ನಂತರ, ಭಾರತವು ಬ್ರಿಟನ್ನಿಂದ ಪಾಠ ಕಲಿಯಬೇಕಿದೆ ಮತ್ತು ಮುಂದೊಂದು ದಿನ ಈ ಪದ್ಧತಿಯನ್ನು ದೇಶದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಚಿದಂಬರಂ ಮತ್ತು ತರೂರ್ ಆಶಿಸಿದ್ದರು.