ಕರ್ನಾಟಕ

karnataka

ETV Bharat / bharat

ಖಲಿಸ್ತಾನಿ ಉಗ್ರನಿಂದ ಪಂಜಾಬ್ ಸಿಎಂಗೆ ಪ್ರಾಣ ಬೆದರಿಕೆ - ಸಿಎಂ ಮಾನ್​ರನ್ನು ಕೊಲೆ

ಖಲಿಸ್ತಾನ್ ಬೆಂಬಲಿಗ ಮತ್ತು ನಿಷೇಧಿತ ಸಿಖ್ ಫಾರ್​ ಜಸ್ಟಿಸ್ ನಾಯಕ​ ಗುರುಪತ್ವಂತ್ ಸಿಂಗ್ ಪನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಹತ್ಯೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾನೆ.

GURPATWANT SINGH PANNU  KILL CM BHAGWANT MANN  ಗಣರಾಜ್ಯೋತ್ಸವ  ಸಿಎಂ ಮಾನ್​ರನ್ನು ಕೊಲೆ  ಪನ್ನು ಬೆದರಿಕೆ
ಗಣರಾಜ್ಯೋತ್ಸವದಂದು ಸಿಎಂ ಮಾನ್​ರನ್ನು ಕೊಲೆ ಮಾಡುವುದಾಗಿ ಪನ್ನು ಬೆದರಿಕೆ

By ETV Bharat Karnataka Team

Published : Jan 16, 2024, 2:30 PM IST

ಚಂಡೀಗಢ(ಪಂಜಾಬ್)​:ಖಲಿಸ್ತಾನಿ ಭಯೋತ್ಪಾದಕ, ನಿಷೇಧಿತ 'ಸಿಖ್ ಫಾರ್ ಜಸ್ಟಿಸ್' ನಾಯಕ ಗುರುಪತ್ವಂತ್ ಸಿಂಗ್ ಪನ್ನು ಮತ್ತೊಮ್ಮೆ ಮೀತಿ ಮೀರಿದ್ದಾನೆ. ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ ಮತ್ತು ಡಿಜಿಪಿ ಗೌರವ್ ಯಾದವ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಜನವರಿ 26ರಂದು ಗಣರಾಜ್ಯೋತ್ಸವದಂದು ಸಿಎಂ ವಿರುದ್ಧ ದಾಳಿ ನಡೆಸಲು ಎಲ್ಲಾ ಗ್ಯಾಂಗ್​ಸ್ಟಾರ್​ಗಳು ಒಗ್ಗೂಡಿ ಎಂದು ಕರೆ ನೀಡಿದ್ದಾರೆ. ಗ್ಯಾಂಗ್​ಸ್ಟಾರ್ಸ್​ ವಿರುದ್ಧ ಪಂಜಾಬ್ ಸರ್ಕಾರ ನಡೆಸಿದ ಕಾರ್ಯಾಚರಣೆ ನಡುವೆ ಸಿಎಂ ಮಾನ್‌ಗೆ ಈ ಬೆದರಿಕೆ ಕರೆ ಬಂದಿದೆ.

'ಗ್ಯಾಂಗ್​ಸ್ಟಾರ್​ಗಳೇ ಒಗ್ಗೂಡಿ':ಪನ್ನು ಹೊಸದಾಗಿ ಬಿಡುಗಡೆ ಮಾಡಿದ ಈ ವಿಡಿಯೋದಲ್ಲಿ, ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು ಪಂಜಾಬ್ ಪೊಲೀಸರ ಪ್ರಯತ್ನಗಳನ್ನು ತಪ್ಪು ಎಂದು ಖಂಡಿಸಿದ್ದಾನೆ. ಪನ್ನು ಇತ್ತೀಚಿನ ಪೊಲೀಸ್ ಎನ್‌ಕೌಂಟರ್‌ಗಳ ಬಗ್ಗೆ ಮಾತನಾಡಿದ್ದನು. ಪಂಜಾಬ್ ಮತ್ತು ವಿದೇಶಗಳಲ್ಲಿನ ಜೈಲುಗಳಲ್ಲಿರುವ ಗ್ಯಾಂಗ್​ಸ್ಟಾರ್​ಗಳು ನನ್ನನ್ನು ಸಂಪರ್ಕಿಸುವಂತೆ ಹೇಳಿದ್ದಾನೆ. ಅಷ್ಟೇ ಅಲ್ಲ, ಪನ್ನು ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಲು ತೆಗೆದುಕೊಂಡ ಕ್ರಮಗಳು ತಪ್ಪು ಎಂದಿದ್ದಾನೆ.

'ಬಿಯಾಂತ್ ಹೈ ಭಗವಂತ್':ಪಂಜಾಬ್ ಪೊಲೀಸರು ಯುವಕರನ್ನು ಅಪರಾಧಿ ಸ್ಥಾನದಲ್ಲಿಟ್ಟು ಎನ್‌ಕೌಂಟರ್ ಮಾಡುತ್ತಿದ್ದಾರೆ. ಪೊಲೀಸರು ಯುವಕರನ್ನು ಗ್ಯಾಂಗ್​ಸ್ಟಾರ್​ಗಳೆಂದು ಘೋಷಿಸಿ ಜೈಲಿಗೆ ತಳ್ಳುತ್ತಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪನ್ನು "ಮುಖ್ಯಮಂತ್ರಿ ಭಗವಂತ್ ಮಾನ್ ಒಬ್ಬ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್" ಎಂದು ಕರೆದಿದ್ದಾನೆ.

ಪನ್ನು ಪಂಜಾಬ್ ಡಿಜಿಪಿ ಗೌರವ್ ಯಾದವ್ ಬಗ್ಗೆಯೂ ಪ್ರತಿಕ್ರಿಯಿಸಿದ್ದಾನೆ. ಈ ವಿಡಿಯೋದಲ್ಲಿ ಭಯೋತ್ಪಾದಕ ಪನ್ನು ತನ್ನೊಂದಿಗೆ ಹೆಚ್ಚು ಹೆಚ್ಚು ಯುವಕರನ್ನು ಸೇರುವಂತೆ ಕೇಳಿಕೊಂಡಿದ್ದಾನೆ. ಜನವರಿ 26ರಂದು ಮುಖ್ಯಮಂತ್ರಿ ಭಗವಂತ್ ಮಾನ್ ಎಲ್ಲಿ ಧ್ವಜಾರೋಹಣ ಮಾಡುತ್ತಾರೋ ಅವರ ಮೇಲೆ ಅಲ್ಲಿ ದಾಳಿ ಮಾಡಬೇಕೆಂದು ಸಂದೇಶ ರವಾನಿಸಿದ್ದಾನೆ.

ಇತ್ತೀಚೆಗೆ ಪನ್ನು ಭಾರತದ ಪ್ರಸಿದ್ಧ ಸ್ಥಳಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಇವುಗಳನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದ್ದು, ಕಾಲಕಾಲಕ್ಕೆ ಭದ್ರತೆಯನ್ನು ಬಿಗಿಗೊಳಿಸುತ್ತಿದೆ. ಸಿಖ್​ ಫಾರ್ ಜಸ್ಟಿಸ್ (SFJ) ಎಂಬ ಪ್ರತ್ಯೇಕತಾವಾದಿ ಸಂಘಟನೆಯನ್ನು ಭಾರತವು 2019 ರಲ್ಲಿ ನಿಷೇಧಿಸಿತು. 2007 ರಲ್ಲಿ ಸ್ಥಾಪನೆಯಾದಾಗ ಗುರುಪತ್ವಂತ್ ಸಿಂಗ್ ಪನ್ನು ಈ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬ. ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆ (ಯುಎಪಿಎ) ಅಡಿಯಲ್ಲಿ 2020ರಲ್ಲಿ ಭಾರತ ಸರ್ಕಾರ ಅವರನ್ನು ಭಯೋತ್ಪಾದಕ ಎಂದು ಘೋಷಿಸಿತು.

ಇದನ್ನೂ ಓದಿ:ಬೆಂಗಳೂರು: ಮ್ಯೂಸಿಯಂಗಳಿಗೆ ಬಾಂಬ್ ಬೆದರಿಕೆ ಇಮೇಲ್, ಮೂರು ಪ್ರತ್ಯೇಕ ಎಫ್ಐಆರ್ ದಾಖಲು

ABOUT THE AUTHOR

...view details