ನವದೆಹಲಿ: 7 ವರ್ಷಗಳ ಹಿಂದೆ ಇದೇ ದಿನ ನನ್ನ ಗೆಳೆಯ ಬ್ರಿಯಾನ್ ಲಾರಾ ಹಾಗೂ ಆತನ ತಂಡ ವೆಸ್ಟ್ ಇಂಡೀಸ್ ವತಿಯಿಂದ ನನಗೊಂದು ಅದ್ಬುತವಾದ ಡ್ರಮ್ವೊಂದನ್ನು ಉಡುಗೊರೆಯಾಗಿ ನೀಡಿದ್ದರು ಎಂದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ತಿಳಿಸಿದ್ದಾರೆ.
7 ವರ್ಷಗಳ ಹಿಂದೆ ಕ್ರಿಕೆಟ್ ದೇವರಿಗೆ ಲಾರಾ ನೀಡಿದ್ದ ಗಿಫ್ಟ್ ಏನು ಗೊತ್ತಾ?
ಸಚಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಡ್ರಮ್ ನುಡಿಸುವ ಒಂದು ನಿಮಿಷ, 15 ಸೆಕೆಂಡುಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 7 ವರ್ಷಗಳ ಹಿಂದೆ ಇದೇ ದಿನ ವಿಂಡೀಸ್ ಟೀಂ ಮತ್ತು ನನ್ನ ಸ್ನೇಹಿತರು ಬ್ರಿಯಾನ್ ಲಾರಾ ಹಾಗೂ ಹೆನ್ರಿಗೈಲ್ ನನಗೆ ಈ ಸುಂದರವಾದ ಸ್ಟೀಲ್ ಡ್ರಮ್ ಅನ್ನು ನೀಡಿದ್ದರು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡು, ಡ್ರಮ್ ನುಡಿಸುವ ಒಂದು ನಿಮಿಷ, 15 ಸೆಕೆಂಡುಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಟೆಸ್ಟ್ ಇತಿಹಾಸದಲ್ಲಿ 200 ಪಂದ್ಯಗಳಲ್ಲಿ ಕಾಣಿಸಿಕೊಂಡ ಏಕೈಕ ಆಟಗಾರ ಸಚಿನ್ ತೆಂಡೂಲ್ಕರ್, 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.