ಮುಂಬೈ (ಮಹಾರಾಷ್ಟ್ರ):ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ತಂಡ ವಶಕ್ಕೆ ಪಡೆದಿದೆ. ಮುಂಬೈನಲ್ಲಿರುವ ತೀಸ್ತಾ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳ ತಂಡ ವಶಕ್ಕೆ ಪಡೆದು, ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ.
2002ರ ಗುಜರಾತ್ ಗಲಭೆ ಬಗ್ಗೆ ತೀಸ್ತಾ ಸೆಟಲ್ವಾಡ್ ನಡೆಸುತ್ತಿರುವ ಎನ್‌ಜಿಒ ಆಧಾರರಹಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದೆ ಎಂದು ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ತೀಸ್ತಾ ಅವರನ್ನು ಗುಜರಾತ್ ಎಎಸ್ಟಿ ತಂಡ ವಶಕ್ಕೆ ಪಡೆದಿದೆ.
ತೀಸ್ತಾ ಸೆಟಲ್ವಾಟ್ರನ್ನು ವಶಕ್ಕೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಇದನ್ನೂ ಓದಿ:ಗುಜರಾತ್ ಗಲಭೆ 2002: ಎಸ್ಐಟಿ ಕ್ಲೀನ್ಚಿಟ್ ಎತ್ತಿಹಿಡಿದ ಸುಪ್ರೀಂ ಕೋರ್ಟ್... ಪಿಎಂ ಮೋದಿಗೆ ರಿಲೀಫ್
ಗುಜರಾತ್ ಗಲಭೆಯಲ್ಲಿ ದೊಡ್ಡ ಪಿತೂರಿ ನಡೆದಿದೆ ಹಾಗೂ ಆಗ ಸಿಎಂ ಆಗಿದ್ದ ನರೇಂದ್ರ ಮೋದಿ ಅವರಿಗೆ ಕ್ಲೀನ್ಚಿಟ್ ನೀಡಿದ್ದನ್ನು ಪ್ರಶ್ನಿಸಿ ಹತ್ಯೆಯಾದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ಶುಕ್ರವಾರವಷ್ಟೇ ಸುಪ್ರೀಂ ವಜಾಗೊಳಿಸಿತ್ತು.
ಇದನ್ನೂ ಓದಿ:ಚಿನ್ನದ ಹೊಳಪಿನಂತೆ ಸತ್ಯ ಪುಟಿದೆದ್ದು ಬಂದಿದೆ.. ಆರೋಪ ಮಾಡಿದವರು ಕ್ಷಮೆ ಕೇಳಲಿ: ಅಮಿತ್ ಶಾ ಆಗ್ರಹ