ನವದೆಹಲಿ:ನಾವು ಬದಲಾವಣೆಯ ಸಮಯದಲ್ಲಿ ಇದ್ದೇವೆ. ಬದಲಾವಣೆಯು ಒಂದು ಯುಗದಲ್ಲಿ ಒಮ್ಮೆ ಮಾತ್ರ ಆಗುತ್ತದೆ. ಈ 'ಡಿಜಿಟಲ್ ಯುಗ'ದಲ್ಲಿ (Digital Age) ತಂತ್ರಜ್ಞಾನ ಮತ್ತು ಡೇಟಾ ಹೊಸ ಅಸ್ತ್ರಗಳಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು.
'ಸಿಡ್ನಿ ಸಂವಾದ' ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪಿಎಂ ಮೋದಿ (PM Modi addresses Sydney Dialogue) ಡಿಜಿಟಲ್ ಯುಗದ ಮಹತ್ವ ಒತ್ತಿ ಹೇಳಿದರು. 'ಭಾರತದ ತಂತ್ರಜ್ಞಾನ: ವಿಕಾಸ ಮತ್ತು ಕ್ರಾಂತಿ' ಎಂಬ ವಿಷಯದ ಕುರಿತು ಮಾತನಾಡುತ್ತಾ, ಡಿಜಿಟಲ್ ಯುಗವು ನಮ್ಮ ಸುತ್ತಲಿನ ಎಲ್ಲವನ್ನೂ ಬದಲಾಯಿಸುತ್ತಿದೆ.
ರಾಜಕೀಯ, ಆರ್ಥಿಕತೆ ಮತ್ತು ಸಮಾಜನ್ನು ಮರು ವ್ಯಾಖ್ಯಾನಿಸಿದೆ. ಇದು ಸಾರ್ವಭೌಮತ್ವ, ಆಡಳಿತ, ನೈತಿಕತೆ, ಕಾನೂನು, ಹಕ್ಕುಗಳು ಮತ್ತು ಭದ್ರತೆಯ ಮೇಲೆ ಹೊಸ ಪ್ರಶ್ನೆಗಳನ್ನು ಎತ್ತುತ್ತಿದೆ. ಇದು ಅಂತಾರಾಷ್ಟ್ರೀಯ ಸ್ಪರ್ಧೆ, ಶಕ್ತಿ ಮತ್ತು ನಾಯಕತ್ವವನ್ನು ಮರುರೂಪಿಸುತ್ತಿದೆ ಎಂದು ಹೇಳಿದರು.
ಪ್ರಗತಿ ಮತ್ತು ಸಮೃದ್ಧಿಯ ಅವಕಾಶಗಳ ಹೊಸ ಯುಗಕ್ಕೆ ಜಗತ್ತು ನಾಂದಿ ಹಾಡಿದೆ. ತಂತ್ರಜ್ಞಾನವು ಜಾಗತಿಕ ಸ್ಪರ್ಧೆಯ ಪ್ರಮುಖ ಸಾಧನವಾಗಿದೆ. ಆದರೆ, ನಾವು ಸಮುದ್ರದ ತಳದಿಂದ ಹಿಡಿದು ಸೈಬರ್ ವರೆಗೆ, ಸೈಬರ್‌ನಿಂದ ಬಾಹ್ಯಾಕಾಶದ ವರೆಗೆ ವಿವಿಧ ಬೆದರಿಕೆ, ಅಪಾಯಗಳನ್ನು ಎದುರಿಸುತ್ತೇವೆ.
ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಎಂದರೆ ಮುಕ್ತವಾಗಿರುವುದು. ಪಟ್ಟಭದ್ರ ಹಿತಾಸಕ್ತಿಗಳಿಗೆ ನಮ್ಮ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲು ನಾವು ಅನುಮತಿಸಬಾರದು ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತವನ್ನು ರೂಪಿಸುವ 5 'ಡಿಜಿಟಲ್ ಪರಿವರ್ತನೆ'ಗಳು:
ಭಾರತವನ್ನು ರೂಪಿಸುವ 5 'ಡಿಜಿಟಲ್ ಪರಿವರ್ತನೆ'ಗಳನ್ನು ಪ್ರಧಾನಿ ಮೋದಿ ಪಟ್ಟಿ ಮಾಡಿದ್ದಾರೆ (PM Modi lists 5 'digital transitions' shaping India). ಒಂದು, ನಾವು ವಿಶ್ವದ ಅತ್ಯಂತ ವ್ಯಾಪಕವಾದ ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ನಿರ್ಮಿಸುತ್ತಿದ್ದೇವೆ.