ಕರ್ನಾಟಕ

karnataka

ETV Bharat / bharat

ತರ್ನ್‌ ತರನ್​​ ಪೊಲೀಸ್ ಠಾಣೆ ಮೇಲೆ ದಾಳಿ: ಜೈಲಿನಲ್ಲಿರುವ ಬಂಧಿತರ ವಿಚಾರಣೆ

ಪಂಜಾಬ್‌ನ ತರ್ನ್‌ ತರನ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ಇತ್ತೀಚೆಗೆ ರಾಕೆಟ್ ಲಾಂಚರ್‌ ಮೂಲಕ ದಾಳಿ ನಡೆಸಲಾಗಿತ್ತು.

By

Published : Dec 12, 2022, 4:00 PM IST

Updated : Dec 12, 2022, 4:18 PM IST

ತರ್ನ್ ತರನ್​​ ಪೊಲೀಸ್ ಠಾಣೆ ಮೇಲೆ ದಾಳಿ
ತರ್ನ್ ತರನ್​​ ಪೊಲೀಸ್ ಠಾಣೆ ಮೇಲೆ ದಾಳಿ

ತರ್ನ್‌ ತರನ್​​ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದ ತನಿಖೆ

ಚಂಡಿಗಢ: ಪಂಜಾಬ್‌ನ ಗಡಿ ಭಾಗದಲ್ಲಿರುವ ತರ್ನ್‌ ತರನ್ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಗೋಯಿಂದ್ವಾಲ್ ಜೈಲಿನಲ್ಲಿರುವ ಕೈದಿಗಳ ವಿಚಾರಣೆ ನಡೆಯುತ್ತಿದೆ. ಸರಹಳ್ಳಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ವರ್ಗಾವಣೆ ಮಾಡಲಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ, ದಾಳಿ ನಡೆಸಿದ ಗ್ರೆನೇಡ್‌ನ ಒಂದು ಭಾಗವನ್ನು ನಾಶಪಡಿಸಲಾಗುತ್ತಿದೆ. ಗ್ರೆನೇಡ್ ಬಿದ್ದಿರುವ ಪ್ರದೇಶವನ್ನು ಮರಳಿನ ಚೀಲಗಳಿಂದ ಮುಚ್ಚಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿ ಕ್ಯಾಮೆರಾಗಳ ಸಹಾಯದಿಂದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ವಿಶೇಷ ತಂಡ ಪೊಲೀಸ್ ಠಾಣೆಗೆ ಭೇಟಿ ನೀಡಿ, ಸಾಕ್ಷ್ಯ ಸಂಗ್ರಹಿಸಲು ಆರಂಭಿಸಿದೆ.

ಇದನ್ನೂ ಓದಿ:ಆಂಧ್ರ-ಒಡಿಶಾ ಗಡಿಯಲ್ಲಿರುವ ಪೊಲೀಸ್ ಠಾಣೆ ಮೇಲೆ ಆದಿವಾಸಿಗಳಿಂದ ದಾಳಿ

ಎನ್‌ಐಎಯ ವಿಶೇಷ ತಂಡ ಭಾನುವಾರ ಬೆಳಗ್ಗೆ ಸರಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿತು. ಜಿಲ್ಲೆಯ ದರೋಡೆಕೋರ ಲಖ್ಬೀರ್ ಸಿಂಗ್ ಲಾಂಡಾ ನಿವಾಸಿ ಹರಿಕೆ ಪಟ್ಟಣ ಸೇರಿದಂತೆ ಇತರ ಕೆಲವು ಶಂಕಿತರ ಮನೆಗಳ ಮೇಲೆ ಶೋಧ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸರಹಳ್ಳಿ ಪೊಲೀಸ್ ಠಾಣೆ ಮೇಲೆ ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ದಾಳಿ ನಡೆಸಲಾಗಿತ್ತು.

Last Updated : Dec 12, 2022, 4:18 PM IST

ABOUT THE AUTHOR

...view details