ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ ಸರಣಿ ಅಪಘಾತ.. ಒಂದೇ ಕುಟುಂಬದ ಐವರು ಸಾವು! - ಹಿಂದಿನಿಂದ ಬಂದ ಕಾರ್ಗೋ ಲಾರಿ​ ಕಾರಿಗೆ ಡಿಕ್ಕಿ

ತಮಿಳುನಾಡಿನ ತಿರುಚ್ಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ - ಕಾರಿಗೆ ಡಿಕ್ಕಿ ಹೊಡೆದ ಲಾರಿ - ಒಂದೇ ಕುಟುಂಬದ ಐವರ ಸಾವು

accident
ಅಪಘಾತ

By

Published : Jan 3, 2023, 1:19 PM IST

ಕಡಲೂರು(ತಮಿಳುನಾಡು): ತಿರುಚ್ಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದ್ದು, ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಕಾಂಚಿಪುರಂನ ವಿಜಯರಾಘನ್​ ಎಂಬವರು ತಮ್ಮ ಕುಟುಂಬದ ಜೊತೆ ಕೇರಳದ ದೇವಸ್ಥಾನಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ತಿರುಚ್ಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್​ ಜಾಮ್​ ಆಗಿದ್ದರಿಂದ ಮುಂದೆ ಹೋಗುತ್ತಿದ್ದ ಲಾರಿಯ ಹಿಂದೆ ತಮ್ಮ ಕಾರು ನಿಲ್ಲಿಸಿದ್ದರು.

ಈ ವೇಳೆ ಹಿಂದಿನಿಂದ ಬಂದ ಕಾರ್ಗೋ ಲಾರಿ​ ಕಾರಿಗೆ ಡಿಕ್ಕಿ ಹೊಡೆದಿದೆ. ಎರಡು ಲಾರಿಗಳ ನಡುವೆ ಸಿಲುಕಿದ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಈ ವೇಳೆ ಎರಡು ಲಾರಿ, ಎರಡು ಕಾರು, ಒಂದು ಖಾಸಗಿ ಬಸ್​ ಅಪಘಾತಕ್ಕೀಡಾಗಿದೆ. ಪರಿಣಾಮ ತಿರುಚ್ಚಿ - ಚೆನ್ನೈ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡಬೇಕಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಟ್ರಾಫಿಕ್​ ನಿಯಂತ್ರಿಸಬೇಕಾಯಿತು. ಇದೇ ವೇಳೆ ಅಪಘಾತದ ಬಗ್ಗೆ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:4 ದಿನದ ಹಿಂದೆ ಆರಂಭಗೊಂಡ ವಂದೇ ಭಾರತ್​ ರೈಲಿಗೆ ಕಲ್ಲು, ಕಿಟಿಕಿ ಗಾಜು ಜಖಂ

ABOUT THE AUTHOR

...view details