ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ಗೂಢಚರ್ಯೆ ಗಂಭೀರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವನ್ನು(SIT) ರಚಿಸಬೇಕೆಂದು ಒತ್ತಾಯಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದ್ದು, ಒಂದು ವೇಳೆ ಮಾಧ್ಯಮಗಳ ವರದಿ ನಿಜವಾದರೆ ಇದೊಂದು ಗಂಭೀರವಾದ ವಿಚಾರ ಎಂದು ಅಭಿಪ್ರಾಯಪಟ್ಟಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾ.ಸೂರ್ಯಕಾಂತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದು, ಭಾರತದ ಎಡಿಟರ್ಸ್ ಗಿಲ್ಡ್ ಸೇರಿ ಸುಮಾರು 9 ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸುತ್ತಿದೆ.
ಈ ವೇಳೆ ಅರ್ಜಿದಾರರ ಪರವಾಗಿ ಮಾತನಾಡಿದ ಹಿರಿಯ ವಕೀಲ ಕಪಿಲ್ ಸಿಬಲ್, ರಾಕ್ಷಸ ತಂತ್ರಜ್ಞಾನವಾದ ಪೆಗಾಸಸ್ ನಮ್ಮ ಅರಿವಿಗೆ ಬರದಂತೆ ನಮ್ಮ ಜೀವನದೊಳಗೆ ಪ್ರವೇಶ ಪಡೆದಿದೆ. ಸಾರ್ವಜನಿಕರ ಖಾಸಗಿತನ, ಗೌರವ ಮತ್ತು ಮೌಲ್ಯಗಳಿಗೆ ಪೆಗಾಸಸ್ ಧಕ್ಕೆ ತಂದಿದೆ ಎಂದು ವಾದಿಸಿದರು.