ಕರ್ನಾಟಕ

karnataka

ETV Bharat / bharat

ಕಳ್ಳ ಪ್ರೊಫೆಸರ್.. 30 ಮೊಬೈಲ್​ಗಳನ್ನು ಕದ್ದಿದ್ದಾರೆ ಮೆಡಿಕಲ್​ ಕಾಲೇಜಿನ ಈ ಪ್ರಾಧ್ಯಾಪಕ..

ವಿಡಿಯೋ ಕಂಡ ಇತರ ಪ್ರಾಧ್ಯಾಪಕರು, ಕಾಲೇಜು ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಎಲ್ಲರೂ ಸೇರಿ ಆ ಪ್ರಾಧ್ಯಾಪಕನ ಕೊಠಡಿಗೆ ಹೋಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ನೀವು ಮೊಬೈಲ್​ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ ಎಂದರೂ, ಆ ಪ್ರಾಧ್ಯಾಪಕ ಮಾತ್ರ ಒಪ್ಪಿರಲಿಲ್ಲ..

By

Published : Dec 19, 2021, 7:50 PM IST

mobiles
ಮೊಬೈಲ್

ಪೌರಿ ಗರ್ವಾಲ್ (ಉತ್ತರಾಖಂಡ):ಇವರು ವೃತ್ತಿಯಲ್ಲಿ ಪ್ರೊಫೆಸರ್. ಆದರೆ, ಪ್ರವೃತ್ತಿ ಮಾತ್ರ ಮೊಬೈಲ್​ ಕಳ್ಳತನ. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಶ್ರೀನಗರದ ಸರ್ಕಾರಿ ಮೆಡಿಕಲ್​ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಈವರೆಗೆ ಬರೋಬ್ಬರಿ 30 ಮೊಬೈಲ್​ಗಳನ್ನ ಕದ್ದಿದ್ದಾರೆ.

ಡಿಸೆಂಬರ್ 15ರಂದು ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು. ವಿದ್ಯಾರ್ಥಿಗಳ ಮೊಬೈಲ್​​ ಫೋನ್‌ಗಳನ್ನು ಕೊಠಡಿ ನಿರೀಕ್ಷಕರು ಪಡೆದಿದ್ದಾರೆ. ಆದರೆ, ಪರೀಕ್ಷೆ ಮುಗಿದ ಮೇಲೆ ಒಬ್ಬ ವಿದ್ಯಾರ್ಥಿಯ ಫೋನ್ ಮಾತ್ರ ಸಿಕ್ಕಿರಲಿಲ್ಲ.

ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅದೇ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮೊಬೈಲ್​ ಕದ್ದಿರುವುದು ಕಂಡು ಬಂದಿದೆ.

ಇದನ್ನೂ ಓದಿ:ಸಿಖ್ಖರ ಧ್ವಜ ನಿಶಾನ್ ಸಾಹಿಬ್‌ಗೆ ಅಗೌರವ ಆರೋಪ ; ಪಂಜಾಬ್‌ನಲ್ಲಿ ಮತ್ತೊಬ್ಬ ವ್ಯಕ್ತಿ ಹತ್ಯೆ

ವಿಡಿಯೋ ಕಂಡ ಇತರ ಪ್ರಾಧ್ಯಾಪಕರು, ಕಾಲೇಜು ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಎಲ್ಲರೂ ಸೇರಿ ಆ ಪ್ರಾಧ್ಯಾಪಕನ ಕೊಠಡಿಗೆ ಹೋಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ನೀವು ಮೊಬೈಲ್​ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ ಎಂದರೂ, ಆ ಪ್ರಾಧ್ಯಾಪಕ ಮಾತ್ರ ಒಪ್ಪಿರಲಿಲ್ಲ.

ಹೀಗಾಗಿ, ಪ್ರಾಧ್ಯಾಪಕನ ಮನೆಗೇ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಈ ವೇಳೆ ಒಂದಲ್ಲ 30 ಮೊಬೈಲ್​ಗಳು ಸಿಕ್ಕಿವೆ. ಸದ್ಯ ಈ ಬಗ್ಗೆ ತನಿಖೆ ನಡೆಸಲು ಕಾಲೇಜು ಆಡಳಿತವು ಸಮಿತಿಯೊಂದನ್ನು ರಚಿಸಿದೆ.

ABOUT THE AUTHOR

...view details