ಕರ್ನಾಟಕ

karnataka

ETV Bharat / bharat

ಬ್ಲ್ಯಾಕ್​​​​​ ಫಂಗಸ್​​ಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿ: ಪ್ರಧಾನಿಗೆ ಸೋನಿಯಾ ಪತ್ರ

ಪ್ರಧಾನಿ ನರೇಂದ್ರ ಮೋದಿಗೆ ಮತ್ತೊಂದು ಪತ್ರ ಬರೆದಿರುವ ಸೋನಿಯಾ ಗಾಂಧಿ ಬ್ಲಾಕ್​ ಫಂಗಸ್​​ಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಕೋರಿದ್ದಾರೆ.

By

Published : May 22, 2021, 3:01 PM IST

Sonia Gandhi
Sonia Gandhi

ನವದೆಹಲಿ:ಕೋವಿಡ್ ಹಾವಳಿ ಹೆಚ್ಚಾಗಿರುವ ಸಮಯದಿಂದಲೂ ಪ್ರಧಾನಿಗೆ ಪತ್ರ ಬರೆಯುತ್ತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇದೀಗ ಮತ್ತೊಂದು ಪತ್ರ ರವಾನೆ ಮಾಡಿದ್ದು, ಬ್ಲಾಕ್​ ಫಂಗಸ್​ಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಕೋರಿದ್ದಾರೆ.

ಪ್ರಧಾನಿಗೆ ಪತ್ರ ಬರೆದ ಸೋನಿಯಾ

ಪ್ರಧಾನಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ, ಈ ಸೋಂಕಿಗೊಳಗಾಗಿರುವ ರೋಗಿಗಳಿಗೆ ತ್ವರಿತ ಗತಿಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಕಪ್ಪು ಶಿಲೀಂದ್ರ ಸೇರಿಸಿಲ್ಲ. ಇದರ ಜತೆಗೆ ಅನೇಕ ಆರೋಗ್ಯ ವಿಮಾ ಯೋಜನೆಗಳಲ್ಲಿ ಸೇರಿಸಿಲ್ಲ. ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಅವರು ತಿಳಿಸಿದ್ದಾರೆ. ಇದರ ಜತೆಗೆ ಬ್ಲ್ಯಾಕ್ ಫಂಗಸ್​​ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬ್ಲ್ಯಾಕ್​ ​ ಫಂಗಸ್​​ ಚಿಕಿತ್ಸೆಗೆ ದೇಶದಲ್ಲಿ ಅಗತ್ಯವಾದ ಔಷಧ ಕಂಡು ಬರುತ್ತಿಲ್ಲ. ಇದಕ್ಕೆ ಬೇಕಾಗಿರುವ ಔಷಧಗಳ ಉತ್ಪಾದನೆ ಹಾಗೂ ಪೂರೈಕೆ ಬಗ್ಗೆ ಕೇಂದ್ರ ಸರ್ಕಾರ ನಿಗಾ ವಹಿಸಬೇಕು. ಬ್ಲ್ಯಾಕ್​​ ಫಂಗಸ್​ ಔಷಧ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಕೋವಿಡ್​​ನಿಂದ ಅನಾಥವಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ; ಪ್ರಧಾನಿಗೆ ಸೋನಿಯಾ ಪತ್ರ

ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿಗೆ ಪತ್ರ ಬರೆದಿದ್ದ ಸೋನಿಯಾ ಗಾಂಧಿ,ಕೋವಿಡ್​ನಿಂದಾಗಿ ಪೋಷಕರು ಅಥವಾ ಕುಟುಂಬದಲ್ಲಿ ಕೆಲಸ ಮಾಡ್ತಿದ್ದ ಸದಸ್ಯರನ್ನ ಕಳೆದುಕೊಂಡಿರುವ ಮಕ್ಕಳಿಗೆ ನವೋದಯ ವಿದ್ಯಾಲಯದಲ್ಲಿ ಉಚಿತವಾಗಿ ಶಿಕ್ಷಣ ನೀಡುವಂತೆ ಕೋರಿ ಅವರು ಪತ್ರ ಬರೆದಿದ್ದರು.

ABOUT THE AUTHOR

...view details