ಅಹಮದ್ನಗರ(ಮಹಾರಾಷ್ಟ್ರ):ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವ ಆರೋಪದ ಮೇಲೆ ರಾಜೇಶ್ ಕಾಶಿನಾಥ್(55) ಅಲಿಯಾಸ್ ಸೋನಾರ್ ಬಾಬಾನನ್ನ ಜನರು ಥಳಿಸಿ, ಕೊಂದಿರುವ ಘಟನೆ ಮಹಾರಾಷ್ಟ್ರದ ಅಹಮದ್ನಗರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತನ ತಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಸೋನಾರ್ ಬಾಬಾನನ್ನು ಹೊಡೆದ ಕೊಂದ ಜನ ಏನಿದು ಪ್ರಕರಣ:ಕಳೆದ ಸೋಮವಾರ ರಾತ್ರಿ ಮಗು ಮನೆ ಮುಂದೆ ಆಡುತ್ತಿದ್ದ ವೇಳೆ ತಾಯಿ ಬಳಿ ಹಣ ಪಡೆದುಕೊಂಡು ಕಿರಾಣಿ ಅಂಗಡಿಗೆ ಹೋಗಿದೆ. 10ರಿಂದ 15 ನಿಮಿಷ ಕಳೆದರೂ ಬಾಲಕ ವಾಪಸ್ ಆಗಿಲ್ಲ. ಹೀಗಾಗಿ, ತಾಯಿ ಹುಡುಕಾಟ ನಡೆಸಿದ್ದಾಳೆ.
ಈ ವೇಳೆ, ನಿಮ್ಮ ಮನಗನನ್ನು ಸೋನಾರ್ ಬಾಬಾ ಕರೆದುಕೊಂಡು ಹೋಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಈ ವೇಳೆ, ಮಹಿಳೆ ಅಲ್ಲಿಗೆ ತೆರಳಿದ್ದಾಳೆ. ಮನೆಯಲ್ಲಿ ಸೋನಾರ್ ಬಾಬಾ ಮಗುವಿನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿರುವುದು ಕಂಡು ಬಂದಿದೆ. ತಕ್ಷಣವೇ ತಾಯಿ ಕೂಗಾಡಿ, ಜನರನ್ನ ಜಮಾಯಿಸಿದ್ದಾರೆ. ಈ ವೇಳೆ, ಆತನ ಮೇಲೆ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ:51 ಟ್ರ್ಯಾಕ್ಟರ್ಗಳಲ್ಲಿ ಅತ್ತೆ ಮನೆಗೆ ದಿಬ್ಬಣ ಬಂದ ರೈತನ ಮಗ... ಅಳಿಯ ಬಂದ ದಾರಿ ಬಿಡಿ!
ಹಲ್ಲೆಯಿಂದಾಗಿ ಸೋನಾರ್ ಬಾಬಾ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಮುಂದಿನ ವಿಚಾರಣೆ ನಡೆಸಿದ್ದಾರೆ.