ತ್ರಿಶೂರ್(ಕೇರಳ): ಯುವಕನೋರ್ವ ತನ್ನ ತಂದೆ-ತಾಯಿಯನ್ನು ನಡು ರಸ್ತೆಯಲ್ಲೇ ಕೊಂದಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ. ಮೃತರನ್ನು ತ್ರಿಶೂರ್ ಇಂಚಕುಂಡ್ ಮೂಲದ ಕುಟ್ಟನ್ (60) ಮತ್ತು ಅವರ ಪತ್ನಿ ಚಂದ್ರಿಕಾ (55) ಎಂದು ಗುರುತಿಸಲಾಗಿದೆ. ಆರೋಪಿ ಅನೀಶ್ (30) ತಲೆಮರೆಸಿಕೊಂಡಿದ್ದು, ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.
ನಡುರಸ್ತೆಯಲ್ಲೇ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಕೊಂದ ಮಗ! - ಕೇರಳದಲ್ಲಿ ತಂದೆ ತಾಯಿಯನ್ನು ಕೊಂದ ಮಗ
ಕೌಟುಂಬಿಕ ಕಲಹದಿಂದಾಗಿ ಯುವಕನೋರ್ವ ತನ್ನ ತಂದೆ-ತಾಯಿಯನ್ನು ರಸ್ತೆಯಲ್ಲೇ ಕೊಂದಿರುವ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.
ನಡುರಸ್ತೆಯಲ್ಲೇ ತಂದೆ-ತಾಯಿಯನ್ನು ಕೊಂದ ಮಗ
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕುಟ್ಟನ್ ಹಾಗೂ ಚಂದ್ರಿಕಾ ರಸ್ತೆಯಲ್ಲಿ ಮನೆಯ ಮುಂದಿನ ಹುಲ್ಲು ಕಟಾವು ಮಾಡುತ್ತಿದ್ದಾಗ ಅನೀಶ್ ಚಾಕು ಹಿಡಿದು ಬಂದು, ಕೊಲೆ ಮಾಡಿದ್ದಾನೆ. ನಂತರ ಸ್ವತಃ ಪೊಲೀಸರಿಗೆ ಕರೆ ಮಾಡಿ ತಂದೆ ತಾಯಿಯನ್ನು ಕೊಂದಿರುವುದಾಗಿ ತಿಳಿಸಿ, ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಹೊನ್ನಾಳಿಯಲ್ಲಿ ಮದ್ಯ ಸೇವನೆಗೆ ಹಣ ಕೊಡದ ತಂದೆಯನ್ನೇ ಕೊಂದ ಮಗ