ಕರ್ನಾಟಕ

karnataka

ETV Bharat / bharat

ಹಿಮಾಚಲ ಪ್ರದೇಶದಲ್ಲಿ ಬಸ್‌ ಕಣಿವೆಗೆ ಬಿದ್ದು 11 ಜನ ಸಾವು; ಪರಿಹಾರ ಘೋಷಿಸಿದ ಪ್ರಧಾನಿ - bus falls into gorge in Himachal Pradesh

ಹಿಮಾಚಲ ಪ್ರದೇಶದಲ್ಲಿ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

Himachal pradesh bus accident, himachal pradesh accident news, many people died in himachal pradesh accident, himachal pradesh incident, latest bus accident in himachal, ಹಿಮಾಚಲ ಪ್ರದೇಶ ಬಸ್ ಅಪಘಾತ, ಹಿಮಾಚಲ ಪ್ರದೇಶ ಅಪಘಾತ ಸುದ್ದಿ, ಹಿಮಾಚಲ ಪ್ರದೇಶ ಅಪಘಾತದಲ್ಲಿ ಅನೇಕ ಜನರು ಸಾವು, ಹಿಮಾಚಲ ಪ್ರದೇಶ ಘಟನೆ, ಹಿಮಾಚಲದಲ್ಲಿ ಇತ್ತೀಚಿನ ಬಸ್ ಅಪಘಾತ,
ಹಿಮಾಚಲ ಪ್ರದೇಶದಲ್ಲಿ ರಸ್ತೆ ಅಪಘಾತ

By

Published : Jul 4, 2022, 10:29 AM IST

Updated : Jul 4, 2022, 12:50 PM IST

ಕುಲ್ಲು(ಹಿಮಾಚಲ ಪ್ರದೇಶ): ಇಲ್ಲಿನ ಸೈನ್ಜ್ ಕಣಿವೆಯ ಕಾಡಿನಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಭೀಕರ ರಸ್ತೆ ಅಪಘಾತ ಸಂಭವಿಸಿತು. ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಕಣಿವೆಗೆ ಬಿದ್ದಿದೆ. ದುರ್ಘಟನೆಯಲ್ಲಿ ಶಾಲಾ ಮಕ್ಕಳು ಸೇರಿ ಸುಮಾರು 11ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

ಸ್ಥಳೀಯರು ಪೊಲೀಸರ ಜೊತೆಗೂಡಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ನತದೃಷ್ಟ ಬಸ್ ಸೈನ್ಜ್ ಕಣಿವೆಯ ಶೆಂಶಾರ್​ನಿಂದ ಸೈನ್ಜ್ ಕಡೆಗೆ ಬರುತ್ತಿತ್ತು ಎಂದು ತಿಳಿದುಬಂದಿದೆ. ಬಸ್‌ನಲ್ಲಿ ಸ್ಥಳೀಯರಲ್ಲದೆ, ಶಾಲಾ ಮಕ್ಕಳು ಸಹ ಪ್ರಯಾಣಿಸುತ್ತಿದ್ದರು.


ಬಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 40 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ರಾಷ್ಟ್ರಪತಿ ಸಂತಾಪ, ಪರಿಹಾರ ಘೋಷಣೆ:ಘಟನೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಜೈರಾಮ್ ಠಾಕೂರ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಬಂಧಿಕರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

ಇದನ್ನೂ ಓದಿ:ಊಟಿಯಲ್ಲಿ ಕಂದಕಕ್ಕೆ ಉರುಳಿದ ಐಟಿ ಉದ್ಯೋಗಿಗಳ ಪ್ರವಾಸದ ವಾಹನ, ಮಹಿಳೆ ಸಾವು

Last Updated : Jul 4, 2022, 12:50 PM IST

ABOUT THE AUTHOR

...view details