ತಿರುವನಂತಪುರಂ:ಕೇರಳದ ಕೊಟ್ಟಾಯಂನಲ್ಲಿರುವ ಕಾನ್ವೆಂಟ್‌ನಲ್ಲಿ ಕ್ಯಾಥೋಲಿಕ್ ಸನ್ಯಾಸಿನಿಯಾಗಿದ್ದ ಸಿಸ್ಟರ್ ಅಭಯಾ ಕೊಲೆ ಪ್ರಕರಣದಲ್ಲಿ ನಾನಾಯ ಕ್ಯಾಥೋಲಿಕ್ ಧರ್ಮಗುರು ಥಾಮಸ್ ಎಂ.ಕೊಟ್ಟೂರ್, ಸಿಸ್ಟರ್ ಸೆಫಿ ತಪ್ಪಿತಸ್ಥರು ಎಂದು ಇಲ್ಲಿನ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಈ ಘಟನೆ ನಡೆದು 28 ವರ್ಷ ಮತ್ತು 9 ತಿಂಗಳ ನಂತರ ತಿರುವನಂತಪುರಂನ ಕೇಂದ್ರ ತನಿಖಾ ದಳ (ಸಿಬಿಐ) ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿದೆ. ಆದರೆ ತಪ್ಪಿತಸ್ಥರಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣ ಇನ್ನೂ ಪ್ರಕಟವಾಗಿಲ್ಲ.
ತಿರುವನಂತಪುರಂ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಸನಾಲ್ ಕುಮಾರ್ ಅವರು, ಕಳೆದ ಮೂರು ದಶಕಗಳಲ್ಲಿ ಅನೇಕ ನಾಟಕೀಯ ತಿರುವುಗಳನ್ನು ಹೊಂದಿದ್ದ್ದ ದೀರ್ಘಾವಧಿಯ ಪ್ರಕರಣದ ಐತಿಹಾಸಿಕ ತೀರ್ಪು ನೀಡಿದ್ದಾರೆ.
21 ವರ್ಷದ ಸಿಸ್ಟರ್ ಅಭಯಾಳನ್ನು ಕೊಲೆ ಮಾಡಿ, ಆಕೆಯ ಮೃದೇಹವನ್ನು 1992 ರಲ್ಲಿ ಕೊಟ್ಟಾಯಂನ ಕಾನ್ವೆಂಟ್‌ನ ಬಾವಿಯೊಳಗೆ ಎಸೆಯಲಾಗಿತ್ತು. ಕೇರಳ ಪೊಲೀಸರು ಆತ್ಮಹತ್ಯೆ ಎಂದು ವರದಿ ಸಲ್ಲಿಕೆಯಾಗಿ ನಂತರ ಸಿಬಿಐ ತನಿಖೆ ನಡೆದು ಕೊಲೆ ಎಂದು ಸಾಬೀತಾದ ಪ್ರಕರಣವಿದು. ಆದರೂ ಆರೋಪಿಗಳ ಪತ್ತೆ ಅಸಾಧ್ಯ ಎಂದು ಸಿಬಿಐ ಹೇಳಿತ್ತು. ಪ್ರಕರಣವನ್ನು ಆತ್ಮಹತ್ಯೆ ಎಂದು ಮುಚ್ಚಿಹಾಕಲು ಸಿಬಿಐ ಎಸ್‌ಪಿ ಒತ್ತಡ ಹೇರಿದ್ದರು ಎಂಬ ಆರೋಪದಿಂದ ಈ ಪ್ರಕರಣ ಸಂಸತ್‌ನಲ್ಲೂ ಸದ್ದು ಮಾಡಿತ್ತು. ಮೂರು – ಮೂರು ಬಾರಿ ತನಿಖೆ ಮುಕ್ತಾಯಗೊಳಿಸಲು ಅನುಮತಿ ನೀಡಬೇಕು ಎಂದು ಸಿಬಿಐ ಕೋರಿದ್ದರೂ ಕೋರ್ಟ್ ಮತ್ತೆ–ಮತ್ತೆ ತನಿಖೆಗೆ ಆದೇಶಿಸಿತ್ತು.
ಓದಿ:ಯುಕೆಯಲ್ಲಿ ಕೊರೊನಾದ ಹೊಸ ಅಲೆ ಹಿನ್ನೆಲೆ: ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ
ಅಂತಿಮವಾಗಿ ಕನಾನಾಯ ಕ್ಯಾಥೋಲಿಕ್ ಧರ್ಮಗುರು ಥಾಮಸ್ ಎಂ.ಕೊಟ್ಟೂರ್, ಸಿಸ್ಟರ್ ಸೆಫಿ ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಸುದೀರ್ಘಕಾಲ ನಡೆದ ತನಿಖೆ, ವಿಚಾರಣೆ ವೇಳೆ, 133 ಜನರನ್ನು ಸಾಕ್ಷಿಯನ್ನಾಗಿ ಮಾಡಲಾಗಿತ್ತು. ಆದರೆ, ಹಲವರು ಮೃತಪಟ್ಟ ಕಾರಣ, ಕೇವಲ 49 ಜನರು ಮಾತ್ರ ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ನುಡಿದರು. ಅಭಯಾಳ ತಂದೆ ಥಾಮಸ್, ತಾಯಿ ಲೆಲ್ಲಮ್ಮಾ ಅವರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.