ಕರ್ನಾಟಕ

karnataka

ETV Bharat / bharat

ಶ್ರದ್ಧಾ ಹಂತಕನಿಗೆ ಸುಳ್ಳು ಪತ್ತೆ ಪರೀಕ್ಷೆ ಮುಂದುವರಿಕೆ.. ಎಫ್ಎಸ್​ಎಲ್​ಗೆ ಆರೋಪಿ ಕರೆತಂದ ಪೊಲೀಸರು

ಹಿಂದೂ ಯುವತಿ ಶ್ರದ್ಧಾ ವಾಲ್ಕರ್​ ಭೀಕರ ಹಂತಕ ಅಫ್ತಾಬ್​ ಪೂನಾವಾಲಾನಿಗೆ ನಡೆಸಲಾಗುತ್ತಿರುವ ಸುಳ್ಳು ಪತ್ತೆ ಪರೀಕ್ಷೆ ಇಂದು ಕೂಡ ಮಂದುವರಿಯಲಿದ್ದು, ಪೊಲೀಸ್​ ಕಸ್ಟಡಿಯಿಂದ ವಿಧಿ ವಿಜ್ಞಾನ ಕಚೇರಿಗೆ ಕರೆತಲಾಯಿತು.

shraddha-murder-accused-aftab
ಶ್ರದ್ಧಾ ಹಂತಕನಿಗೆ ಸುಳ್ಳು ಪತ್ತೆ ಪರೀಕ್ಷೆ

By

Published : Nov 29, 2022, 3:37 PM IST

Updated : Nov 29, 2022, 4:42 PM IST

ನವದೆಹಲಿ:ಪ್ರೇಯಸಿಯನ್ನ35 ಪೀಸ್ ಮಾಡಿ​ ಕೊಲೆ ಮಾಡಿದ್ದ ಹಂತಕ ಅಫ್ತಾಬ್​ ಅಮೀನ್​ ಪೂನಾವಾಲಾನ ಸುಳ್ಳು ಪತ್ತೆ ಪರೀಕ್ಷೆ ಇಂದು ಕೂಡ ಮುಂದುವರಿದಿದ್ದು, ದೆಹಲಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸ್​ ಕಸ್ಟಡಿಯಿಂದ ಬಿಗಿಭದ್ರತೆಯಲ್ಲಿ ಕರೆತರಲಾಯಿತು.

ನಿನ್ನೆ ಸಂಜೆ ಪಾಲಿಗ್ರಾಫ್​(ಸುಳ್ಳು ಪತ್ತೆ) ಪರೀಕ್ಷೆಗೆಂದು ಅಫ್ತಾಬ್​ನನ್ನು ಕರೆದೊಯ್ಯುವಾಗ ಎಫ್​ಎಸ್​ಎಲ್​​ ಕಚೇರಿಯ ಮುಂದೆ ಜಮಾಯಿಸಿದ್ದ ಹಿಂದುಪರ ಸಂಘಟನೆಯ ಕಾರ್ಯಕರ್ತರು ಹಂತಕನಿದ್ದ ವಾಹನದ ಮೇಲೆ ಆಯುಧಗಳಿಂದ ದಾಳಿ ಮಾಡಿದ್ದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಳಿಕ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

ಕೊಲೆ ಪ್ರಕರಣದಲ್ಲಿ ಹಂತಕ ನೀಡುತ್ತಿರುವ ಹೇಳಿಕೆಗಳು ಎಷ್ಟು ಸತ್ಯ ಎಂಬುದನ್ನು ದೃಢೀಕರಿಸಲು ದೆಹಲಿ ಪೊಲೀಸರು ಕೋರ್ಟ್​ ಅನುಮತಿಯ ಮೇರೆಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸುತ್ತಿದ್ದಾರೆ. ಇದಾದ ಬಳಿಕ ನಾರ್ಕೊಟಿಕ್​ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ಶ್ರದ್ಧಾ ಹಂತಕನಿದ್ದ ವಾಹನದ ಮೇಲೆ ಹಿಂದು ಸೇನಾನಿಗಳ ದಾಳಿ, ಇಬ್ಬರು ವಶ

Last Updated : Nov 29, 2022, 4:42 PM IST

ABOUT THE AUTHOR

...view details