ನವದೆಹಲಿ:ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ 2020-21ರಲ್ಲಿ ಇಡೀ ದೇಶ ಲಾಕ್ಡೌನ್ನಿಂದ ತತ್ತರಿಸುತ್ತಿದ್ದರೆ, ಇದೇ ವೇಳೆ ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದಾಗಿ ದೇಶಾದ್ಯಂತ 85,000 ಕ್ಕೂ ಹೆಚ್ಚು ಜನರು ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂಬ ವಿಷಯ ಬೆಳಕಿಗೆ ಆರ್ಟಿಐ ಮೂಲಕ ಬಹಿರಂಗವಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚು ವರದಿಯಾದ ಹೆಚ್‌ಐವಿ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರದಲ್ಲಿ 10,498 ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲೇ ಅತ್ಯಧಿಕ ಕೇಸ್ ಕಂಡು ಬಂದಿವೆ. ಆಂಧ್ರಪ್ರದೇಶದಲ್ಲಿ 9,521, ಕರ್ನಾಟಕದಲ್ಲಿ 8,947 ಕೇಸ್ ದಾಖಲಾಗುವ ಮೂಲಕ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ.
ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ 3,037 ಮತ್ತು 2,757 ಜನರು ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ಇದೇ ವೇಳೆ 2011-12 ರಿಂದ 2020-21 ರ 10 ವರ್ಷಗಳ ಅವಧಿಯಲ್ಲಿ ಅಸುರಕ್ಷಿತ ಲೈಂಗಿಕ ಚಟುವಟಿಕೆಯಿಂದಾಗಿ ವರದಿಯಾದ ಹೆಚ್‌ಐವಿ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ.
ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ ಆರ್‌ಟಿಐಗೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್‌ಎಸಿಒ) ಈ ಮಾಹಿತಿ ನೀಡಿದೆ. 2011-12ರಲ್ಲಿ 2.4 ಲಕ್ಷ ಹೆಚ್‌ಐವಿ ಪ್ರಕರಣಗಳು ದಾಖಲಾದರೆ, ಅದು 2019-20ರಲ್ಲಿ 1.44 ಲಕ್ಷಕ್ಕೆ ಇಳಿದಿತ್ತು. ಬಳಿಕ 2020- 21ರಲ್ಲಿ ಇದು 85,268ಕ್ಕೆ ಇಳಿಕೆಯಾಗಿದೆ.
ಇದನ್ನೂ ಓದಿ:ಗ್ರಾಹಕರ ಸೆಳೆಯಲು ವಾಟ್ಸಾಪ್ನಿಂದ ಹಣ ಪಾವತಿಗೆ ಕ್ಯಾಶ್ಬ್ಯಾಕ್ ಆಫರ್