ಕರ್ನಾಟಕ

karnataka

ETV Bharat / bharat

ಯುದ್ಧ ನಿಲ್ಲಿಸಿ: ರಷ್ಯಾ- ಉಕ್ರೇನ್​​​ಗೆ ಮತ್ತೊಮ್ಮೆ ಮನವಿ ಮಾಡಿದ ಮೋದಿ: ರೊಮೇನಿಯಾ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ ಪಿಎಂ - ಯುದ್ಧ ನಿಲ್ಲಿಸಿ: ರಷ್ಯಾ- ಉಕ್ರೇನ್​​​ಗೆ ಮತ್ತೊಮ್ಮೆ ಮನವಿ ಮಾಡಿದ ಮೋದಿ: ರೊಮೇನಿಯಾ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ ಪಿಎಂ

ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಮುಂದಿನ ಕೆಲವು ದಿನಗಳಲ್ಲಿ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ತಮ್ಮ ವಿಶೇಷ ಪ್ರತಿನಿಧಿಯಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ನಿಯೋಜಿತವಾಗಿರುವ ವಿಚಾರವನ್ನು ರೊಮೇನಿಯಾ ಪ್ರಧಾನಮಂತ್ರಿಗಳ ಗಮನಕ್ಕೆ ತಂದರು.

ಯುದ್ಧ ನಿಲ್ಲಿಸಿ: ರಷ್ಯಾ- ಉಕ್ರೇನ್​​​ಗೆ ಮತ್ತೊಮ್ಮೆ ಮನವಿ ಮಾಡಿದ ಮೋದಿ: ರೊಮೇನಿಯಾ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದ ಪಿಎಂ
russia-ukraine-war-pm-modi-appeals-for-cessation-of-hostilities

By

Published : Mar 1, 2022, 7:34 AM IST

ನವದೆಹಲಿ:ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ರೊಮೇನಿಯಾದ ಪ್ರಧಾನಿ ನಿಕೋಲೇ-ಐಯೋನೆಲ್ ಸಿಯುಕಾ ಜತೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ರೊಮೇನಿಯಾ ನೀಡಿದ ನೆರವಿಗಾಗಿ ಪ್ರಧಾನಿ ನಿಕೊಲೆ - ಐಯೋನೆಲ್ ಸಿಯುಕಾ ಅವರಿಗೆ ಧನ್ಯವಾದ ಹೇಳಿದರು. ಭಾರತೀಯ ನಾಗರಿಕರಿಗೆ ವೀಸಾಗಳಿಲ್ಲದೇ ರೊಮೇನಿಯಾ ಪ್ರವೇಶಿಸಲು ಅವಕಾಶ ನೀಡಿದ್ದನ್ನು ವಿಶೇಷವಾಗಿ ಶ್ಲಾಘಿಸಿದರು.

ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಮುಂದಿನ ಕೆಲವು ದಿನಗಳಲ್ಲಿ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ತಮ್ಮ ವಿಶೇಷ ಪ್ರತಿನಿಧಿಯಾಗಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ನಿಯೋಜಿತವಾಗಿರುವ ವಿಚಾರವನ್ನು ರೊಮೇನಿಯಾ ಅಲ್ಲಿನ ಪ್ರಧಾನಮಂತ್ರಿಗಳ ಗಮನಕ್ಕೆ ತಂದರು.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಪ್ರಧಾನಮಂತ್ರಿ ಮೋದಿ ತಮ್ಮ ಕಳವಳ ವ್ಯಕ್ತಪಡಿಸಿದರು. ಯುದ್ಧ ನಿಲ್ಲಿಸಲು ಮಾತುಕತೆಯೇ ಪರಿಹಾರ ಎಂದು ಮತ್ತೊಮ್ಮೆ ಪುನರುಚ್ಛರಿಸಿದರು. ರಾಷ್ಟ್ರಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಮಹತ್ವವನ್ನು ಪ್ರಧಾನಿ ಮೋದಿ ಇದೇ ವೇಳೆ ಒತ್ತಿ ಹೇಳಿದರು.
ಇದನ್ನು ಓದಿ:ಉಕ್ರೇನ್​​​- ರಷ್ಯಾ ನಡುವೆ ಯಶಸ್ವಿಯಾಗದ ಮಾತುಕತೆ.. ಆದರೂ ಸಂಧಾನಕ್ಕೆ ಕೆಲ ಅಂಶಗಳನ್ನು ಕಂಡುಕೊಂಡ ಉಭಯ ರಾಷ್ಟ್ರಗಳು

ABOUT THE AUTHOR

...view details