ಮುಜಾಫ್ಪರ್ಪುರ(ಬಿಹಾರ):ಜಮೀನು ವಿವಾದ ನೆಪದಲ್ಲಿ ಬಿಹಾರದ ಮುಜಾಫ್ಫರ್ಪುರದಲ್ಲಿ ಅನಾಗರಿಕ ಘಟನೆಯೊಂದು ನಡೆದಿದ್ದು, ಮಹಿಳೆಯೋರ್ವಳನ್ನು ಥಳಿಸಿ ನಂತರ ವಿವಸ್ತ್ರಗೊಳಿಸಿ ಆಕೆಯ ಖಾಸಗಿ ಭಾಗದಲ್ಲಿ ಮೆಣಸಿನಪುಡಿ ಹಾಕಿ ಚಿತ್ರಹಿಂಸೆ ನೀಡಿ, ನಂತರ ಕೈಕಾಲುಗಳನ್ನು ಮುರಿದಿರುವ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಮುಸಾಹರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಮೀನಿನ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿದೆ. ಈ ವೇಳೆ ಒಂದು ಗುಂಪಿನವರು ಮತ್ತೊಂದು ಗುಂಪಿನ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಈ ರೀತಿಯ ದುಷ್ಕೃತ್ಯ ಎಸಗಿದ್ದಾರೆ.
ಸೋಮವಾರ ಸಂಜೆ ಜಮೀನು ವಿವಾದ ಘಟನೆ ನಡೆದಿದೆ. ಲಖನ್ ಸಾಹ್, ಮಖಾನ್ ಸಾಹ್, ರಾಮು ಸಾಹ್, ರಾಜು ಕುಮಾರ್, ರಾಮ್ ಕುಮಾರ್ ಸೇರಿದಂತೆ 12ಕ್ಕೂ ಹೆಚ್ಚು ಮಂದಿಯಿಂದ ಈ ದುಷ್ಕೃತ್ಯ ನಡೆದಿದೆ ಎಂದು ಸಂತ್ರಸ್ಥೆಯ ಕುಟುಂಬಸ್ಥರು ತಿಳಿಸಿದ್ದಾರೆ.
ಗಾಯಾಳು ಮಹಿಳೆಯನ್ನು ಮುಜಾಫ್ಪರ್ಪುರದ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಸೋತ ನಿರಾಶೆಯಲ್ಲಿ ಭಾರತೀಯರ ಕಣ್ಣೀರು; ಸಂತೈಸಿ amazing opponent ಎಂದು ಬೆನ್ನುತಟ್ಟಿದ ಬ್ರಿಟನ್