ಕರ್ನಾಟಕ

karnataka

ETV Bharat / bharat

ಸಿಬ್ಬಂದಿಯಿದ್ದಾಗಲೇ ಪೊಲೀಸ್​ ಠಾಣೆಯ ಮೇಲೆ ರಾಕೆಟ್​ ಲಾಂಚರ್​ ಗ್ರೆನೇಡ್​ ದಾಳಿ

ಪಂಜಾಬ್​ನ ತರನ್​ ತರನ್​ ಜಿಲ್ಲೆಯ ಪೊಲೀಸ್​ ಠಾಣೆಯ ಮೇಲೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಗ್ರೆನೇಡ್ ದಾಳಿ ಮಾಡಿದ್ದಾರೆ. ಅದು ಸಿಡಿದಿದ್ದು, ಠಾಣೆಯಲ್ಲಿದ್ದ ಸಿಬ್ಬಂದಿಗೆ ಹಾನಿಯಾಗಿಲ್ಲ.

By

Published : Dec 10, 2022, 8:29 AM IST

Updated : Dec 10, 2022, 12:21 PM IST

rpg-attack-on-police
ರಾಕೆಟ್​ ಲಾಂಚರ್​ ದಾಳಿ

ತರನ್ ತರನ್​(ಪಂಜಾಬ್​):ತರನ್​ ತರನ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ಶಂಕಿತ 'ಭಯೋತ್ಪಾದಕ' ದಾಳಿ ನಡೆದಿದೆ. ರಾಕೆಟ್ ಚಾಲಿತ ಗ್ರೆನೇಡ್ (ಆರ್‌ಪಿಜಿ) ಅನ್ನು ಶುಕ್ರವಾರ ರಾತ್ರಿ ಎಸೆಯಲಾಗಿದ್ದು, ಅದು ಸಿಡಿದಿದೆ. ಈ ವೇಳೆ ಠಾಣೆಯಲ್ಲಿ ಠಾಣೆಯ ಎಸ್​ಎಚ್​ಒ ಸೇರಿ 8 ಸಿಬ್ಬಂದಿ ಇದ್ದರು. ಘಟನೆಯಲ್ಲಿ ಅದೃಷ್ಟವಶಾತ್​ ಯಾರಿಗೂ ಹಾನಿಯಾಗಿಲ್ಲ.

ಪಂಜಾಬ್​ನಲ್ಲಿ ರಾಕೆಟ್​ ಲಾಂಚರ್​ ದಾಳಿ

ಗ್ರೆನೇಡ್​ ಸಿಡಿದು ಪೊಲೀಸ್ ಠಾಣೆಯ ಮುಖ್ಯ ದ್ವಾರದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರ್‌ಪಿಜಿಯಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆಯು ಭಯೋತ್ಪಾದನೆ ಅನುಮಾನ ಮೂಡಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೇ, ಏಳು ತಿಂಗಳಲ್ಲಿ ಪೊಲೀಸ್ ಠಾಣೆಯ ಮೇಲೆ ನಡೆದ ಎರಡನೇ ಆರ್‌ಪಿಜಿ ದಾಳಿ ಇದಾಗಿದೆ. ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ನ ಇಂಟೆಲಿಜೆನ್ಸ್ ವಿಂಗ್ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆದಿತ್ತು.

ಓದಿ:ಕೊಳವೆ ಬಾವಿಗೆ ಬಿದ್ದ ಮಗು ಸಾವು.. ರಕ್ಷಣಾ ಕಾರ್ಯಾಚರಣೆ ಅಂತ್ಯ..! ಮುಗಿಲು ಮುಟ್ಟಿದ ಆಕ್ರಂದನ

Last Updated : Dec 10, 2022, 12:21 PM IST

ABOUT THE AUTHOR

...view details