ದಿಂಡಿಗಲ್ (ತಮಿಳುನಾಡು) :ಕುರಿ, ಮೇಕೆ, ಹಸುಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗುವುದು ಸರ್ವೇ ಸಾಮಾನ್ಯ. ಆದರೆ, ತಮಿಳುನಾಡಿನ ದಿಂಡಿಗಲ್ನಲ್ಲಿ ಆಯೋಜನೆಗೊಂಡಿದ್ದ ಹುಂಜಗಳ ಪ್ರದರ್ಶನದಲ್ಲಿ ಅಳಿವಿನಂಚಿನಲ್ಲಿರುವ ಹುಂಜವೊಂದು ದಾಖಲೆಯ 3.5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಬರೋಬ್ಬರಿ 3.5 ಲಕ್ಷ ರೂ.ಗೆ ಹರಾಜುಗೊಂಡ ಹುಂಜ.. ಅಂತಹದ್ದು ಏನಿದೆ ಇದರಲ್ಲಿ!?
ತಮಿಳುನಾಡಿನಲ್ಲಿ ಆಯೋಜನೆಗೊಂಡಿದ್ದ ಹುಂಜಗಳ ಪ್ರದರ್ಶನದಲ್ಲಿ ಗಿಳಿ ಮೂಗಿನ ಹುಂಜವೊಂದು ದಾಖಲೆಯ ಬೆಲೆಗೆ ಮಾರಾಟವಾಗಿದೆ..
rooster exhibition was held in Tamil Nadu
ಫೆ.27ರಂದು ತಮಿಳುನಾಡಿನ ದಿಂಡಿಗಲ್ನಲ್ಲಿ ಹುಂಜಗಳ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಪ್ರಮುಖವಾಗಿ ದೇಶದಲ್ಲಿ ನಶಿಸಿ ಹೋಗುತ್ತಿರುವ 'ಗಿಳಿ ಮೂಗಿನ ಹುಂಜ'ಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿತ್ತು. ಇದರಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಪುದುಚೇರಿ ಸೇರಿದಂತೆ ವಿವಿಧ ರಾಜ್ಯದ 400ಕ್ಕೂ ಹೆಚ್ಚಿನ ಹುಂಜುಗಳು ಭಾಗಿಯಾಗಿದ್ದವು.
ಚೂಪಾದ ಗಿಣಿ ಮೂಗು, ಬಿಳಿ ಬಣ್ಣ ಹಾಗೂ ಎತ್ತರವಾಗಿದ್ದ ಹುಂಜವೊಂದು 3.5 ಲಕ್ಷ ರೂಪಾಯಿಗೆ ಮಾರಾಟವಾಗಿದೆ.