ಕರ್ನಾಟಕ

karnataka

ETV Bharat / bharat

ವಾಹನ ತಪಾಸಣಾ ಸಿಬ್ಬಂದಿ ಮೇಲೆ ಹರಿದ ಟ್ರಕ್​: ಕಾನ್​ಸ್ಟೇಬಲ್​ ಸೇರಿ ಇಬ್ಬರು ಸಾವು - etvbharatkannada

ಇಂದು ಬೆಳಗ್ಗೆ ಸುಲ್ತಾನ್‌ಪುರದ ಲಕ್ನೋ ಬಲ್ಲಿಯಾ ಹೆದ್ದಾರಿಯಲ್ಲಿ ತಪಾಸಣೆ ನಡೆಸುತ್ತಿದ್ದ ತಂಡದ ಮೇಲೆ ಟ್ರಕ್​ ಹರಿದು ಇಬ್ಬರು ಸಿಬ್ಬಂದಿ ಸಾವಿಗೀಡಾಗಿದ್ದಾರೆ.

ತಪಾಸಣೆ ನಡೆಸುತ್ತಿದ್ದವರಿಗೆ ಡಿಕ್ಕಿ ಹೊಡೆದ ಟ್ರಕ್​: ಸ್ಥಳದಲ್ಲೇ ಇಬ್ಬರ ಸಾವು ಸ
ತಪಾಸಣೆ ನಡೆಸುತ್ತಿದ್ದವರಿಗೆ ಡಿಕ್ಕಿ ಹೊಡೆದ ಟ್ರಕ್​: ಸ್ಥಳದಲ್ಲೇ ಇಬ್ಬರ ಸಾವು ಸ

By

Published : Jul 26, 2022, 5:42 PM IST

Updated : Jul 26, 2022, 7:06 PM IST

ಸುಲ್ತಾನ್‌ಪುರ(ಉತ್ತರಪ್ರದೇಶ): ಲಕ್ನೋ ಬಲ್ಲಿಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ ನಡೆಸುತ್ತಿದ್ದ ಎಆರ್‌ಟಿಒ ಎನ್‌ಫೋರ್ಸ್‌ಮೆಂಟ್ ತಂಡದ ಮೇಲೆ ವೇಗವಾಗಿ ಬಂದ ಟ್ರಕ್​ ಡಿಕ್ಕಿ ಹೊಡೆದು ಅವರ ಮೇಲೆಯೇ ಹರಿದಿದೆ. ಘಟನೆಯಲ್ಲಿ ಗುತ್ತಿಗೆ ಚಾಲಕ ಮತ್ತು ಸಿಬ್ಬಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಟ್ರಕ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋಸೈಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಉಧಮ್‌ಪುರ ಛೇದನದ ಬಳಿ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಟ್ರಕ್ ಇವರ ಮೇಲೆ ಹಾದುಹೋಗಿದೆ. ಗುತ್ತಿಗೆ ಚಾಲಕ ಅಬ್ದುಲ್ ಮೊಮಿನ್ ಖಾನ್, ಶಾಸ್ತ್ರಿ ನಗರ ಪೊಲೀಸ್ ಠಾಣೆಯ ಕೊತ್ವಾಲಿ ನಗರದ ನಿವಾಸಿ ಮತ್ತು ಬಿಕೆಟಿ ಲಕ್ನೋದ ಕಾನ್‌ಸ್ಟೇಬಲ್ ಅರುಣ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಆರ್‌ಟಿಒ ರಾಕೇಶ್ ಕುಮಾರ್ ವರ್ಮಾ ಅವರ ನೇತೃತ್ವದಲ್ಲಿ ತಪಾಸಣೆ ನಡೆಸಲಾಗುತ್ತಿತ್ತು. ಘಟನೆ ವೇಳೆ ವಾಹನಕ್ಕೂ ಹಾನಿಯಾಗಿದೆ.

ಈ ಪ್ರಕರಣ ಸಂಬಂಧ ಟ್ರಕ್ ಮಾಲೀಕರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಘಟನೆ ಕುರಿತು ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಚಾಲಕ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಯುತ್ತಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಎಆರ್‌ಟಿಒ ರಾಕೇಶ್‌ ಕುಮಾರ್‌ ವರ್ಮಾ ಅವರು ತಂಡದೊಂದಿಗೆ ಪರಿಶೀಲನೆ ನಡೆಸಿ ಕಡಿಪುರದಿಂದ ಹಿಂತಿರುಗುತ್ತಿದ್ದರು. ಆ ವೇಳೆ ಸ್ವಲ್ಪ ಸಮಯ ದಾರಿಯಲ್ಲಿ ಕಾರನ್ನು ನಿಲ್ಲಿಸಲಾಗಿತ್ತು, ಅಷ್ಟರಲ್ಲಿ ಈ ಅವಘಡ ಸಂಭವಿಸಿದೆ. ಟ್ರಕ್ ಚಾಲಕ ತಲೆಮರೆಸಿಕೊಂಡಿದ್ದಾನೆ ಎಂದು ಎಸ್‌ಎಚ್‌ಒ ಸಂದೀಪ್ ಕುಮಾರ್ ರೈ ತಿಳಿಸಿದ್ದಾರೆ.

ಇದನ್ನೂ ಓದಿ:ಸಂಬಳ ಕೊಡಲು ಲಂಚ: ಎಸಿಬಿ ಬಲೆಗೆ ಬಿದ್ದ ಆರೋಗ್ಯ ಇಲಾಖೆ ನೌಕರ

Last Updated : Jul 26, 2022, 7:06 PM IST

ABOUT THE AUTHOR

...view details