ಕರ್ನಾಟಕ

karnataka

ETV Bharat / bharat

ಬಹುಕೋಟಿ ಮೇವು ಹಗರಣ ಪ್ರಕರಣ; ಲಾಲೂ ಪ್ರಸಾದ್ ಯಾದವ್​ಗೆ ಜಾಮೀನು ಮಂಜೂರು!

ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ಗೆ ಜಾರ್ಖಂಡ್ ಹೈಕೋರ್ಟ್‌ ಜಾಮೀನು ನೀಡಿ ಆದೇಶ ಹೊರಡಿಸಿದ್ದು, ಯಾದವ್​ ಕುಟುಂಬ ನಿಟ್ಟುಸಿರು ಬಿಟ್ಟಿದೆ.

By

Published : Apr 17, 2021, 12:55 PM IST

Updated : Apr 17, 2021, 1:23 PM IST

RJD supremo Lalu Yadav gets bail from Jharkhand High Court in fodder scam case
ಲಾಲು ಪ್ರಸಾದ್​ ಯಾದವ್

ರಾಂಚಿ:ಬಹುಕೋಟಿಮೇವು ಹಗರಣ ಪ್ರಕರಣದಲ್ಲಿ ಜೈಲು ಸೇರಿದ್ದ ಆರ್​ಜೆಡಿ ಮುಖ್ಯಸ್ಥ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್​ಗೆ ಜಾರ್ಖಂಡ್ ಹೈಕೋರ್ಟ್‌ ಇಂದು ಜಾಮೀನು ನೀಡಿದೆ. ಬಹು ಕೋಟಿ ಮೇವು ಹಗರಣದ ಇತರ ಮೂರು ಪ್ರಕರಣಗಳಲ್ಲಿ ಅವರು ಈಗಾಗಲೇ ಜಾಮೀನು ಪಡೆದಿದ್ದಾರೆ.

ಪದೇ ಪದೆ ಕಾಡುತ್ತಿದ್ದ ಅನಾರೋಗ್ಯದ ಹಿನ್ನೆಲೆಯಲ್ಲಿ ತಮಗೆ ಜಾಮೀನು ನೀಡುವಂತೆ ಹಲವು ಬಾರಿ ಲಾಲೂ ಪ್ರಸಾದ್ ಯಾದವ್ ಕೋರ್ಟ್​ ಮೊರೆ ಹೋಗಿದ್ದರು. ಕೋರ್ಟ್​ ಇವರ ಮನವಿಯನ್ನು ತಿರಸ್ಕರಿಸಿತ್ತು. ಈಗ ಅವರ ಮನವಿ ಆಲಿಸಿದ ಜಾರ್ಖಂಡ್ ಹೈಕೋರ್ಟ್‌ ಜಾಮೀನು ನೀಡಿ ಆದೇಶ ನೀಡಿದೆ.

900 ಕೋಟಿ ರೂ.ಗಳ ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಲಾಲೂ ಪ್ರಸಾದ್ ಯಾದವ್ ಜಾಮೀನು ಪಡೆದಿದ್ದರು. ಆದರೆ, ದುಮ್ಕಾ ಖಜಾನೆ ಪ್ರಕರಣದಲ್ಲಿ ಜಾಮೀನು ಸಿಕ್ಕಿರಲಿಲ್ಲ. ಜಾರ್ಖಂಡ್ ಹೈಕೋರ್ಟ್‌ ಇಂದು ಜಾಮೀನು ನೀಡಿ ಆದೇಶ ಹೊರಡಿಸಿದೆ. ಇದರಿಂದ ಯಾದವ್​ ಕುಟುಂಬ ನಿಟ್ಟುಸಿರು ಬಿಟ್ಟಿದೆ.

Last Updated : Apr 17, 2021, 1:23 PM IST

ABOUT THE AUTHOR

...view details