ಕರ್ನಾಟಕ

karnataka

ETV Bharat / bharat

ಹರಿಯಾಣದ ಕ್ರಿಕೆಟಿಗನಿಂದ ಕೋಟಿ ರೂಪಾಯಿ ಕಳೆದುಕೊಂಡ ವಿಕೆಟ್​ ಕೀಪರ್​ ಪಂತ್

ಐಷಾರಾಮಿ ವಾಚ್‌, ಬ್ಯಾಗ್‌, ಆಭರಣಗಳು ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ಪ್ರಾರಂಭಿಸಿರುವುದಾಗಿ ಹರಿಯಾಣದ ಕ್ರಿಕೆಟಿಗನೊಬ್ಬ ರಿಷಬ್‌ ಪಂತ್​ಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ..

By

Published : May 24, 2022, 2:22 PM IST

Rishabh Pant duped  Pant cheated by Haryana cricketer  Mrinank Singh duped Pant  Pant cheated  ಮೋಸ ಹೋದ ವಿಕೆಟ್​ ಕೀಪರ್​ ರಿಷಬ್​ ಪಂತ್  ವಿಕೆಟ್​ ಕೀಪರ್​ ರಿಷಬ್​ ಪಂತ್ ಸುದ್ದಿ  ವಂಚನೆಗೊಳಗಾದ ವಿಕೆಟ್​ ಕೀಪರ್​ ರಿಷಬ್​ ಪಂತ್
ವಿಕೆಟ್​ ಕೀಪರ್​ ರಿಷಬ್​ ಪಂತ್

ನವದೆಹಲಿ :ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಹಾಗೂ ಭಾರತದ ವಿಕೆಟ್‌ಕೀಪರ್ ರಿಷಬ್ ಪಂತ್​ಗೆ ಹರಿಯಾಣದ ಕ್ರಿಕೆಟಿಗ ಮೃಣಾಕ್ ಸಿಂಗ್ 1.63 ಕೋಟಿಗೂ ಅಧಿಕ ಮೊತ್ತ ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಈ ಸಂಬಂಧ ಈ ಹಿಂದೆಯೇ ಮೃಣಾಕ್ ವಿರುದ್ಧ ಪಂತ್ ಮ್ಯಾನೇಜರ್ ಪುನೀತ್ ಸೋಲಂಕಿ ವಂಚನೆ ಪ್ರಕರಣ ದಾಖಲಿಸಿದ್ದರು. ಇದೀಗ ಬೇರೊಂದು ಪ್ರಕರಣದಲ್ಲಿ ಮೃಣಾಕ್​ರನ್ನು ಪೊಲೀಸರು ಬಂಧಿಸಿದ್ದು, ಇದರ ಬೆನ್ನಲ್ಲೇ ರಿಷಭ್ ಪಂತ್ ವಂಚನೆಗೊಳಗಾಗಿರುವ ಮಾಹಿತಿ ಹೊರಬಿದ್ದಿದೆ.

ಉದ್ಯಮಿಯೊಬ್ಬರಿಗೆ ಅಗ್ಗದ ದರದಲ್ಲಿ ದುಬಾರಿ ವಾಚ್ ಮತ್ತು ಮೊಬೈಲ್ ಫೋನ್​ಗಳನ್ನು ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಮೃಣಾಕ್ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೀಗ ಹರಿಯಾಣ ಕ್ರಿಕೆಟಿಗನಿಂದ ರಿಷಬ್ ಪಂತ್ ಕೂಡ ಮೋಸ ಹೋಗಿರುವ ವಿಚಾರ ಬಹಿರಂಗವಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಮೃಣಾಕ್ ಸಿಂಗ್ 1 ಕೋಟಿ 63 ಲಕ್ಷ ಚೆಕ್ ಬೌನ್ಸ್ ಮಾಡುವ ಮೂಲಕ ರಿಷಭ್ ಪಂತ್​ಗೆ ವಂಚಿಸಿದ್ದಾರೆ ಎಂದು ಮ್ಯಾನೇಜರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಉದ್ಯಮಿಯೊಬ್ಬರಿಗೆ 6 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಜುಹು ಪೊಲೀಸರು ಈ ತಿಂಗಳ ಆರಂಭದಲ್ಲಿ ಮೃಣಾಕ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಡಿಆರ್​​ಎಸ್​ ಪಡೆಯದೆ ಎಡವಿದ ಡೆಲ್ಲಿ: ನಿರ್ಧಾರದ ಹಿಂದಿನ ಕಾರಣ ತಿಳಿಸಿದ ಪಂತ್

ABOUT THE AUTHOR

...view details