ಕರ್ನಾಟಕ

karnataka

ETV Bharat / bharat

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿಯಲ್ಲಿದ್ದ ಷೋಡಶಿ ಮೇಲೆ ಅತ್ಯಾಚಾರ!? - gandhinagar latest news

ಗುಜರಾತ್​​ನ ಗಾಂಧಿನಗರದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಹ್ಯಾಂಡ್​ ಬಾಲ್​ ತರಬೇತಿ ಪಡೆಯುತ್ತಿದ್ದ 16 ವರ್ಷದ ಬಾಲಕಿ ಮೇಲೆ ಆಕೆಯ ಜೊತೆಯೇ ತರಬೇತಿ ಪಡೆಯುತ್ತಿದ್ದ ಯುವಕ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

gandhinagar
16 ವರ್ಷದ ಯುವತಿ ಮೇಲೆ ಅತ್ಯಾಚಾರ

By

Published : Jul 15, 2021, 5:07 PM IST

ಗಾಂಧಿನಗರ/ಗುಜರಾತ್​: ಗಾಂಧಿನಗರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ.

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದ 16 ವರ್ಷದ ಬಾಲಕಿ ಮೇಲೆ 20 ವರ್ಷದ ಆಟಗಾರನೊಬ್ಬ ವಿವಾಹವಾಗುವುದಾಗಿ ನಂಬಿಸಿ ಅತಿಥಿ ಗೃಹಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಹ್ಯಾಂಡ್​​ಬಾಲ್​ ತರಬೇತಿಗಾಗಿ ಸಂತ್ರಸ್ತೆ ಗಾಂಧಿನಗರಕ್ಕೆ ಬಂದಿದ್ದು, ಭಾರತದ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದಳು. ಅಲ್ಲಿ ಆಕೆಗೆ ಹರಿಯಾಣದ ಯುವಕ ರವಿ ಎನ್ನುವವನ ಪರಿಚಯವಾಗಿದೆ. ಆತ ಸಹ ಹ್ಯಾಂಡ್​ಬಾಲ್​​ ತರಬೇತಿಗೆಂದು ಬಂದಿದ್ದ. ನಂತರ ಆಕೆ ಜೊತೆ ಸಲುಗೆ ಬೆಳೆಸಿ ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ತರಬೇತಿ ಮಧ್ಯೆ ಆಗಾಗ್ಗೆ ಮನೆಗೆ ಹೋಗುತ್ತಿದ್ದ ಸಂತ್ರಸ್ತೆ ಮನೆಯಲ್ಲಿ ಸಹ ರವಿ ಜೊತೆ ಯಾವಾಗಲೂ ಫೋನ್​ನಲ್ಲಿ ಮಾತನಾಡುತ್ತಿದ್ದಳು ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ. ಅವನು ಮದುವೆಯಾಗುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ ಎಂದು ಆಕೆಯ ಕುಟುಂಬ ಸದಸ್ಯರು ಅಮರಾವತಿ ಪೊಲೀಸ್ ಠಾಣೆಯಲ್ಲಿ ರವಿ ವಿರುದ್ಧ ದೂರು ದಾಖಲಿಸಿದ್ದಾರೆ.

ABOUT THE AUTHOR

...view details