ಕರ್ನಾಟಕ

karnataka

ETV Bharat / bharat

ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ್ದ ದುರುಳ: 48 ಗಂಟೆಗಳ ಚಿಕಿತ್ಸೆ ಫಲಿಸದೇ ಮಹಿಳೆ ಸಾವು - ಅತ್ಯಾಚಾರ ಸಂತ್ರಸ್ತೆ ಸಾವು

ಶೇ.90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅತ್ಯಾಚಾರ ಸಂತ್ರಸ್ತೆ 48 ಗಂಟೆಗಳ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Rape survivor dies after being set on fire in Rajasthan
ಅತ್ಯಾಚಾರ ಸಂತ್ರಸ್ತೆ ಸಾವು

By

Published : Mar 6, 2021, 12:56 PM IST

ಹನುಮಗಢ (ರಾಜಸ್ಥಾನ): ಎರಡು ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಗೆ ಆರೋಪಿ ಬೆಂಕಿ ಹಚ್ಚಿದ್ದ ಪ್ರಕರಣ ಸಂಬಂಧ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಕೊನೆಯುಸಿರೆಳೆದಿದ್ದಾರೆ.

ಪ್ರಕರಣ ಹಿನ್ನೆಲೆ

2018ರಲ್ಲಿ ರಾಜಸ್ಥಾನದ ಹನುಮಗಢ ಜಿಲ್ಲೆಯ 33 ವರ್ಷದ ಮಹಿಳೆ ಮೇಲೆ ಪ್ರದೀಪ್ ವಿಷ್ಣೋಯ್ ಎಂಬ ವ್ಯಕ್ತಿ ಅತ್ಯಾಚಾರ ಎಸಗಿದ್ದನು. ಗಂಡನೊಂದಿಗೆ ಜಗಳವಾಗಿದ್ದ ಕಾರಣ ಮಹಿಳೆ ತನ್ನ ತಾಯಿ ಮನೆಯಲ್ಲಿ ವಾಸವಾಗಿದ್ದರು. ಆದರೆ, ಮೊನ್ನೆ ಮನೆಗೆ ನುಗ್ಗಿದ ವಿಷ್ಣೋಯ್, ಸೀಮೆಎಣ್ಣೆ ಸುರಿದು ಮಹಿಳೆಗೆ ಬೆಂಕಿ ಹಚ್ಚಿದ್ದಾನೆ.

ಇದನ್ನೂ ಓದಿ: ಅತ್ಯಾಚಾರದಿಂದ ಬದುಕುಳಿದ ಸಂತ್ರಸ್ತೆ ಮೇಲೆ ಬೆಂಕಿ ಹಚ್ಚಿದ ದುಷ್ಕರ್ಮಿ

ಶೇ.90ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಬಿಕಾನೆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, 48 ಗಂಟೆಗಳ ಚಿಕಿತ್ಸೆ ಫಲಿಸದೇ ಮಹಿಳೆ ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ.

ಅತ್ಯಾಚಾರ ಸಂಬಂಧ 2018ರಲ್ಲೇ ಆರೋಪಿ ವಿಷ್ಣೋಯ್ ವಿರುದ್ಧ ಕೇಸ್​ ದಾಖಲಾಗಿತ್ತು. ಇದೀಗ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.

ABOUT THE AUTHOR

...view details