ನವದೆಹಲಿ/ ಜೈಪುರ:ದೇಶಾದ್ಯಂತ ಈ ಭಾರಿ ಬಿಸಿಲಿನ ದಗೆ- ತಾಪ ಜನರ ದೇಹವನ್ನ ಕೆಂಡದಂತೆ ಸುಡುತ್ತಿದೆ. ಭಾರಿ ಪ್ರಮಾಣದ ಬಿಸಿಲಿನ ತಾಪಕ್ಕೆ ಉತ್ತರ ಭಾರತ ತತ್ತರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜಸ್ಥಾನ ಸೇರಿ ಉತ್ತರದ ಕೆಲ ರಾಜ್ಯಗಳ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ 45 ಡಿಗ್ರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಇದು ಜನರನ್ನ ಕಂಗಾಲಾಗಿಸಿದೆ.
ರಾಜಸ್ಥಾನದಲ್ಲಿ 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು: ದೆಹಲಿಯನ್ನೂ ಸುಡುತ್ತಿದೆ ಬಿಸಿಲು ರಾಜಸ್ಥಾನದ 33 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ 47 ಡಿಗ್ರಿ ಮತ್ತು ಅದಕ್ಕಿಂತ ಹೆಚ್ಚಿನ ತಾಪಮಾನ ಕಂಡು ಬಂದಿದ್ದು, ಸುಡು ಬಿಸಿಲಿನಿಂದ ಬಚಾವ್ ಆಗಲು ಜನ ಮನೆ ಬಿಟ್ಟು ಹೊರ ಬರುತ್ತಿಲ್ಲ.
ಶ್ರೀ ಗಂಗಾನಗರದಲ್ಲಿ ಅತಿ ಹೆಚ್ಚು ಅಂದರೆ 48.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು ಕರೌಲಿ ಮತ್ತು ಬರಾನ್ 47.8 ಡಿಗ್ರಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಪಿಲಾನಿಯಲ್ಲಿ 47.7 ಡಿಗ್ರಿ ದಾಖಲಾಗಿದ್ದರೆ, ಜೈಸಲ್ಮೇರ್‌ನಲ್ಲಿ 47.5 ಸೆಲ್ಸಿಯಸ್, ಬಿಕಾನೇರ್‌ನಲ್ಲಿ 47.4 ಧೋಲ್‌ಪುರದಲ್ಲಿ 47.6, ಬುಂದಿಯಲ್ಲಿ 47, ಕೋಟಾದಲ್ಲಿ 47.2 ಡಿಗ್ರಿ ಸೆಲ್ಸಿಯಸ್ ಮತ್ತು ಹನುಮಾನ್‌ಗಢದಲ್ಲಿ 47.1 ಡಿಗ್ರಿ ತಾಪಮಾನ ದಾಖಲಾಗಿದೆ.
ದೆಹಲಿ ಜನರನ್ನೂ ಸುಡುತ್ತಿದೆ ಬಿಸಿಲು:ದೆಹಲಿಯ ಕೆಲವು ಭಾಗಗಳಲ್ಲಿ ಗುರುವಾರ ತಾಪಮಾನವು 44-45 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ. ದೆಹಲಿಯ ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಗರಿಷ್ಠ ತಾಪಮಾನವು 42.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇದನ್ನು ಓದಿ:ಅಮೃತಸರ್ ಗುರು ನಾನಕ್ ದೇವ್ ಆಸ್ಪತ್ರೆಯಲ್ಲಿ ಭಾರಿ ಅಗ್ನಿ ದುರಂತ