ಕರ್ನಾಟಕ

karnataka

ETV Bharat / bharat

ರಾಜ್​ ಠಾಕ್ರೆ ಪ್ರಚೋದನಾತ್ಮಕ ಭಾಷಣ ಆರೋಪ: ಕ್ರಮದ ಸುಳಿವು ನೀಡಿದ ಮಹಾರಾಷ್ಟ್ರ ಗೃಹ ಸಚಿವ

ಎಂಎನ್​ಎಸ್​ ಪಕ್ಷದ ರಾಜ್​ ಠಾಕ್ರೆ ಔರಂಗಾಬಾದ್​​ನಲ್ಲಿ ಮಾಡಿದ ಭಾಷಣ ಸಮಾಜದಲ್ಲಿ ಒಡಕು ಉಂಟು ಮಾಡುವ ರೀತಿಯಾಗಿದ್ದು, ರಾಜ್​ ಠಾಕ್ರೆ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಮಹಾರಾಷ್ಟ್ರ ಗೃಹ ಸಚಿವರು ಸುಳಿವು ನೀಡಿದ್ದಾರೆ.

Raj Thackeray's provocative
ರಾಜ್​ ಠಾಕ್ರೆಯಿಂದ ಪ್ರಚೋದನಾತ್ಮಕ ಭಾಷಣ ಆರೋಪ

By

Published : May 2, 2022, 4:03 PM IST

ಮುಂಬೈ:ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಗಡುವು ಹಾಕಿದ್ದಲ್ಲದೇ, ಪ್ರಚೋದನಾತ್ಮಕ ಭಾಷಣ ಮಾಡಿದ್ದ ಎಂಎನ್ಎಸ್​ ಮುಖಂಡ ರಾಜ್​ ಠಾಕ್ರೆ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ.

ಔರಂಗಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ರಾಜ್​ ಠಾಕ್ರೆ ಮಾಡಿದ ಭಾಷಣವು ಸಮಾಜವನ್ನು ವಿಘಟಿಸುವ ಗುರಿ ಹೊಂದಿದೆ. ಅಲ್ಲದೇ, ಶಿವಸೇನೆ ಮತ್ತು ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಮೇಲೆ ದಾಳಿ ಮಾಡುವುದೇ ಇದರ ಉದ್ದೇಶವಾಗಿತ್ತು ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥರು 'ರಾಜ್ಯದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರಕ್ಕೆ 'ಹಿಂದೂ' ಪದದ ಬಗ್ಗೆಯೇ ಅಲರ್ಜಿ ಇದೆ ಎಂದು ಹೇಳಿದ್ದಾರೆ. ಅವರ ಈ ಭಾಷಣವು ಸಮಾಜದಲ್ಲಿ ಒಡಕು ಮತ್ತು ದ್ವೇಷ ಸೃಷ್ಟಿಸುವ ಪ್ರಯತ್ನವಾಗಿದೆ. ಪೊಲೀಸರು ಅವರ ಭಾಷಣ ಆಲಿಸಿ ಆಕ್ಷೇಪಾರ್ಹ ಎಂಬುದನ್ನು ನಿರ್ಧರಿಸಿದ ಬಳಿಕ ಅವರ ವಿರುದ್ಧ ಕ್ರಮಕ್ಕೆ ತೀರ್ಮಾನಿಸಲಾಗುವುದು ಎಂದು ಪಾಟೀಲ್​ ತಿಳಿಸಿದ್ದಾರೆ.

ಓದಿ:ಹಿಂದುತ್ವದ ನೆಪದಲ್ಲಿ ಬಿಜೆಪಿ ನನ್ನ ತಂದೆಗೆ ಮೋಸ ಮಾಡಿದೆ: ಸಿಎಂ ಉದ್ಧವ್ ಠಾಕ್ರೆ

For All Latest Updates

TAGGED:

ABOUT THE AUTHOR

...view details