ಕರ್ನಾಟಕ

karnataka

ETV Bharat / bharat

ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದಿಕ್ಕಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿ - ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆ

ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಬಿಜೆಪಿ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಜಯ ಸಾಧಿಸಿದೆ.

Ruling Cong loses to BJP in Panchayat & Zila Parishad polls
ಕಾಂಗ್ರೆಸ್ ಹಿಂದಿಕ್ಕಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿ

By

Published : Dec 9, 2020, 3:55 PM IST

ಜೈಪುರ: ರಾಜಸ್ಥಾನದ ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಮೇಲುಗೈ ಸಾಧಿಸಿರುವ ಬಿಜೆಪಿ 1,911 ಸ್ಥಾನಗಳನ್ನು ಗೆದ್ದುಕೊಂಡಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ 1,781 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮುಖಭಂಗ ಅನುಭವಿಸಿದೆ.

425 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು, ಬಹುಜನ ಸಮಾಜ ಪಕ್ಷ 3, ಸಿಪಿಐ-ಎಂ 16 ಸ್ಥಾನಗಳನ್ನು ಪಡೆದುಕೊಂಡರೆ, ಆರ್‌ಎಲ್‌ಪಿ 57 ಸ್ಥಾನಗಲ್ಲಿ ಗೆಲುವು ಸಾಧಿಸಿದೆ ಎಂದು ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್ ತಿಳಿಸಿದೆ. 4,371 ಸ್ಥಾನಗಳಲ್ಲಿ 4,239 ಸ್ಥಾನಗಳಿಗೆ ಫಲಿತಾಂಶ ಪ್ರಕಟಿಸಲಾಗಿದ್ದು ಎಣಿಕೆ ಕಾರ್ಯ ಇನ್ನೂ ಮುಂದುವರೆದಿದೆ.

ಪಂಚಾಯತ್ ಸಮಿತಿ ಚುನಾವಣೆಯೊಂದಿಗೆ ಬಿಜೆಪಿಯ ಗೆಲುವಿನ ಓಟ ಮುಂದುವರಿದಿದ್ದು ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 353 ಸ್ಥಾನಗಳನ್ನು ಗೆದ್ದಿದ್ರೆ, ಕಾಂಗ್ರೆಸ್ 252 ಕ್ಕೆ ಸೀಮಿತವಾಗಿದೆ. ಸಿಪಿಐ-ಎಂ 2 ಸ್ಥಾನ , ಸ್ವತಂತ್ರರು 18 ಮತ್ತು ಆರ್‌ಎಲ್‌ಪಿ10 ಸ್ಥಾನಗಳನ್ನು ಪಡೆದಿವೆ.

"ಈ ಗೆಲುವು ಬಿಜೆಪಿಯ ಗ್ರಾಮೀಣ ನೀತಿಗಳಿಗೆ ಜನರು ಒತ್ತಿದ ಮುದ್ರೆಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಅಭಿವೃದ್ಧಿಪಡಿಸಿದ ಸಿದ್ಧಾಂತ ಮತ್ತು ಬಿಜೆಪಿ ಕಾರ್ಯಕರ್ತರು ಕೈಗೊಂಡ ಶ್ರಮವನ್ನು ಪ್ರತಿಬಿಂಬಿಸುತ್ತದೆ" ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಮಯದಲ್ಲಿ ಈ ಫಲಿತಾಂಶ ಹೊರಬಂದಿದೆ. ಕಾಂಗ್ರೆಸ್ಸಿಗರು ಭಾರತ್ ಬಂದ್ ಭಾಗವಾಗಿ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾಗ, ಜನರು ಎರಡು ವರ್ಷಗಳ ದುಷ್ಕೃತ್ಯದ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಪೂನಿಯಾ ಹೇಳಿದ್ದಾರೆ.

ABOUT THE AUTHOR

...view details