ಕರ್ನಾಟಕ

karnataka

ETV Bharat / bharat

ಸಚಿವ ಸ್ಥಾನದಿಂದ ವಜಾಗೊಂಡ ಕಿನ್ ಗ್ಯಾಂಗ್.. ಭಾರತ - ಚೀನಾ ಸಂಬಂಧಗಳ ಮೇಲೆ ಬೀರಬಹುದಾದ ಪರಿಣಾಮಗಳೇನು? - ಚೀನಾದ ಮಾಜಿ ವಿದೇಶಾಂಗ ಸಚಿವ ಕಿನ್ ಗ್ಯಾಂಗ್

ಚೀನಾದ ಉನ್ನತ ಶಾಸಕಾಂಗವು ಕಿನ್ ಗ್ಯಾಂಗ್ ಅವರನ್ನು ವಿದೇಶಾಂಗ ಸಚಿವ ಸ್ಥಾನದಿಂದ ವಜಾಗೊಳಿಸಿದೆ. ಈ ಬೆಳವಣಿಗೆ ಭಾರತ - ಚೀನಾ ಸಂಬಂಧಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುವುದರ ಕುರಿತು 'ಈಟಿವಿ ಭಾರತ'ದ ಚಂದ್ರಕಲಾ ಚೌಧರಿ ಅವರು ವಿದೇಶಾಂಗ ನೀತಿ ವಿಶ್ಲೇಷಕರೊಂದಿಗೆ ಮಾತನಾಡಿದ್ದಾರೆ. ಅದರ ಸಮಗ್ರ ವರದಿ ಇಲ್ಲಿದೆ.

Qin Gang
ಕಿನ್ ಗ್ಯಾಂಗ್

By

Published : Aug 1, 2023, 7:20 AM IST

ನವದೆಹಲಿ:ಚೀನಾದ ಮಾಜಿ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ನಂತರ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಚೀನಾದ ರಾಜತಾಂತ್ರಿಕತೆಗೆ ಇದರ ಅರ್ಥವೇನು? ಮತ್ತು ಇದು ವಿದೇಶಿ ಸಂಬಂಧಗಳ ಮೇಲೆ, ವಿಶೇಷವಾಗಿ ಭಾರತ - ಚೀನಾ ಸಂಬಂಧಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಪ್ರಶ್ನೆ ಉದ್ಭವಿಸಿದೆ.

ಇತ್ತೀಚೆಗೆ ಚೀನಾದ ಉನ್ನತ ಶಾಸಕಾಂಗ ಕಿನ್ ಗ್ಯಾಂಗ್ ಅವರನ್ನು ವಿದೇಶಾಂಗ ಸಚಿವ ಸ್ಥಾನದಿಂದ ತೆಗೆದುಹಾಕಿತು ಮತ್ತು ಅವರ ಸ್ಥಾನಕ್ಕೆ ವಾಂಗ್ ಯಿ ಅವರನ್ನು ನೇಮಿಸಿತು. ಕಿನ್​ ಗ್ಯಾಂಗ್ ಅವರು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿಶ್ವಾಸಾರ್ಹ ಎಂದು ಪರಿಗಣಿಸಲ್ಪಟ್ಟವರು. ಡಿಸೆಂಬರ್ 2022ರಲ್ಲಿ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದರು. ಅವರು ಜೂನ್ 25 ರಂದು ಬೀಜಿಂಗ್‌ನಲ್ಲಿ ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೆ ರುಡೆಂಕೊ ಅವರನ್ನು ಭೇಟಿಯಾದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಈ ಬೆಳವಣಿಗೆ ವಿಶೇಷವಾಗಿ ಭಾರತ - ಚೀನಾ ಸಂಬಂಧಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಕುರಿತು 'ಈಟಿವಿ ಭಾರತ'ದ ಪ್ರತಿನಿಧಿ ವಿದೇಶಾಂಗ ನೀತಿ ವಿಶ್ಲೇಷಕ, ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಅಧ್ಯಯನಗಳ ನಿರ್ದೇಶಕ ಮತ್ತು ಕಾರ್ಯತಂತ್ರದ ಅಧ್ಯಯನ ಕಾರ್ಯಕ್ರಮದ ಮುಖ್ಯಸ್ಥ ಪ್ರೊಫೆಸರ್ ಹರ್ಷ್.ವಿ.ಪಂತ್ ಅವರೊಂದಿಗೆ ಮಾತನಾಡಿದ್ದಾರೆ.

ಹಠಾತ್​ ತೀರ್ಮಾನ- "ಕಿನ್ ಗ್ಯಾಂಗ್ ಅವರನ್ನು ಹಠಾತ್ ವಜಾಗೊಳಿಸಿರುವುದರಿಂದ ಚೀನಾದಲ್ಲಿ ದೇಶೀಯ ಪರಿಸ್ಥಿತಿ ಎಷ್ಟು ಅನಿಶ್ಚಿತವಾಗಿದೆ, ಸರ್ವಾಧಿಕಾರ ಮತ್ತು ಅಧಿಕಾರದ ಕೇಂದ್ರೀಕರಣದಲ್ಲಿ ಕ್ಸಿ ಜಿನ್‌ಪಿಂಗ್ ಅವರ ನಿಯಂತ್ರಣವು ಹೇಗೆ ಹೆಚ್ಚಾಗಿದೆ ಎಂಬುದನ್ನು ಒತ್ತಿ ಹೇಳುತ್ತದೆ. ಇದು ಚೀನಾಕ್ಕೆ ಅತ್ಯಂತ ಅಸಮರ್ಥ ಫಲಿತಾಂಶಗಳನ್ನು ನೀಡುತ್ತದೆ. ಏಕೆಂದರೆ ಕಿನ್​ ಗ್ಯಾಂಗ್​ ಒಂದು ಹಂತದಲ್ಲಿ ಜಗತ್ತಿಗೆ ಚೀನಾದ ಪ್ರಮುಖ ವ್ಯಕ್ತಿಯಾಗಿದ್ದರು. ಮತ್ತು ಯುಎಸ್ ಆಂಟನಿ ಬ್ಲಿಂಕೆನ್ ಸೇರಿದಂತೆ ಉನ್ನತ ಮಟ್ಟದ ನಾಯಕರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಈಗ ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಅಧಿಕೃತ ದಾಖಲೆಯಲ್ಲಿ ಅವರ ಉಲ್ಲೇಖವನ್ನು ಅಳಿಸಲಾಗಿದೆ. ಆದ್ದರಿಂದ, ಕ್ಸಿ ಜಿನ್‌ಪಿಂಗ್ ನೇತೃತ್ವದಲ್ಲಿ ಇಂದಿನ ಚೀನಾದಂತಹ ದೇಶದೊಂದಿಗೆ ಒಬ್ಬರು ಹೇಗೆ ವ್ಯವಹರಿಸುತ್ತಾರೆ ಎಂಬುದು ಸವಾಲಾಗಿದೆ. ಜಾಗತಿಕ ವ್ಯವಹಾರಗಳಲ್ಲಿ ಚೀನಾ ಬಹುತೇಕ 'ಅಸಹಜ ರಾಜ್ಯ'ವಾಗುತ್ತಿದೆ ಮತ್ತು ಭಾರತ-ಚೀನಾ ಗಡಿಯಲ್ಲಿ ಆ ಅಸಹಜತೆ ಕಂಡುಬರುತ್ತಿದೆ" ಎಂದು ಅವರು ಹೇಳಿದರು.

ಸಾಮಾನ್ಯ ರೀತಿಯಲ್ಲಿ ವ್ಯವಹರಿಸುವುದು ಕಷ್ಟ: ಕಿನ್ ಗ್ಯಾಂಗ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವುದರಿಂದ ಸಿನೋ-ಇಂಡಿಯಾ ಡೈನಾಮಿಕ್ ಅನ್ನು ಬದಲಾಯಿಸುವ ಸಾಧ್ಯತೆಯಿಲ್ಲ ಎಂದು ಪ್ರೊಫೆಸರ್ ಪಂತ್ ಹೇಳಿದರು. ಏಕೆಂದರೆ ಭಾರತವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದರೆ, ಕಿನ್ ಗ್ಯಾಂಗ್ ಅವರನ್ನು ವಜಾಗೊಳಿಸಿರುವುದರಿಂದ ಚೀನಾದೊಂದಿಗೆ ಸಾಮಾನ್ಯ ರೀತಿಯಲ್ಲಿ ವ್ಯವಹರಿಸುವುದು ಕಷ್ಟಕರವಾಗುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದರು.

ಕಿನ್‌ ಅವರನ್ನು ವಜಾ ಮಾಡಿರುವುದು ಮತ್ತು ವಾಂಗ್‌ ಅವರ ನೇಮಕ ಚೀನಾದ ವಿದೇಶಾಂಗ ನೀತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಉಂಟು ಮಾಡಿಲ್ಲ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಚೈನೀಸ್ ಅಧ್ಯಯನದ ಪ್ರಾಧ್ಯಾಪಕ ಡಾ. ಶ್ರೀಕಾಂತ್ ಕೊಂಡಪಲ್ಲಿ ಅವರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ. ಕಿನ್ ಅಧ್ಯಕ್ಷ ಜಿನ್‌ಪಿಂಗ್ ಅವರ ಆಶ್ರಿತರಾಗಿದ್ದರು. ಅವರು ಮತ್ತು ವಾಂಗ್ ನೀತಿಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ಒಟ್ಟಾರೆಯಾಗಿ ಅವರು ಕ್ಸಿ ಅವರ ಮಾರ್ಗದರ್ಶನದಲ್ಲಿ ಇದ್ದರು. ಕ್ಸಿ ಅವರ ಅಧಿಕಾರಾವಧಿಯು ವಿದೇಶಾಂಗ ನೀತಿ ಡೊಮೇನ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲವು ಪ್ರಕ್ಷುಬ್ಧತೆ ಕಂಡಿತು. ವಾಂಗ್ ಅವರು ಭಾರತದೊಂದಿಗಿನ ಪ್ರಾದೇಶಿಕ ವಿವಾದದ ವಿಶೇಷ ಪ್ರತಿನಿಧಿಯೂ ಆಗಿದ್ದಾರೆ. ವಾಂಗ್ ಗಾಲ್ವಾನ್‌ನ ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ಆದ್ದರಿಂದ ಫ್ರಾಸ್ಟಿ ಸಂಬಂಧಗಳು ಭಾರತದೊಂದಿಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಂತರ, ವಾಂಗ್ ಈಗ ಚೀನಾದ ಎರಡು ಹಿರಿಯ ವಿದೇಶಾಂಗ ನೀತಿಯ ಸ್ಥಾನಗಳನ್ನು ಹೊಂದಿದ್ದಾರೆ. ಅವರು ಚೀನಾ ರಾಷ್ಟ್ರ ಮತ್ತು ಚೀನೀ ಕಮ್ಯುನಿಸ್ಟ್ ಪಕ್ಷ ಎರಡನ್ನೂ ಪ್ರತಿನಿಧಿಸಲಿದ್ದಾರೆ. ವಾಂಗ್ ಅವರು ಸಾಮಾನ್ಯವಾಗಿ ವಿದೇಶಾಂಗ ನೀತಿ ವಿಚಾರದಲ್ಲಿ ಸ್ಪಷ್ಟ ನಿಲುವಿಗೆ ಹೆಸರುವಾಸಿಯಾಗಿದ್ದಾರೆ. ಜತೆಗೆ ಚೀನಾ-ಭಾರತ ಸಂಬಂಧಗಳಿಗೆ ಬಂದಾಗ, ಅವರು ಯಾವಾಗಲೂ ಸ್ನೇಹ ಪರ ಸಂಬಂಧಗಳನ್ನು ಚಿತ್ರಿಸಲು ಪ್ರಯತ್ನಿಸುತ್ತಾರೆ ಎನ್ನಲಾಗಿದೆ.

ಆದಾಗ್ಯೂ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಎನ್‌ಎಸ್‌ಎ ಸಭೆಯಲ್ಲಿ ವಾಂಗ್ ಅವರೊಂದಿಗಿನ ಇತ್ತೀಚಿನ ಸಭೆಯಲ್ಲಿ, ಎನ್‌ಎಸ್‌ಎ ಅಜಿತ್ ದೋವಲ್ ಅವರು ಕಠಿಣ ಮಾತುಕತೆ ನಡೆಸಿದರು. ಎರಡು ದೇಶಗಳ ನಡುವಿನ ಸಂಬಂಧದ ನಂಬಿಕೆ ಸಾರ್ವಜನಿಕ ಮತ್ತು ರಾಜಕೀಯ ಆಧಾರವಾಗಿದೆ.

ಇದನ್ನೂ ಓದಿ:ಭಾರತದ SCO ವಿದೇಶಾಂಗ ಸಚಿವರ ಸಭೆಗೆ ಚೀನಾ ವಿದೇಶಾಂಗ ಸಚಿವ ಕಿನ್ ಗ್ಯಾಂಗ್ ಭಾಗಿ

ABOUT THE AUTHOR

...view details