ಕರ್ನಾಟಕ

karnataka

ಯುಪಿ ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ನೀಡಿ: ಕೇಂದ್ರ ಸರ್ಕಾರಕ್ಕೆ ಪ್ರಿಯಾಂಕ ಗಾಂಧಿ ಆಗ್ರಹ

ಉತ್ತರಪ್ರದೇಶದ ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿಸಿಲ್ಲವೆಂದು ಕೇಂದ್ರ ಸರ್ಕಾರ ನಡೆ ವಿರುದ್ಧ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : Dec 7, 2020, 3:13 PM IST

Published : Dec 7, 2020, 3:13 PM IST

ಪ್ರಿಯಾಂಕ ಗಾಂಧಿ
ಪ್ರಿಯಾಂಕ ಗಾಂಧಿ

ನವದೆಹಲಿ:ಉತ್ತರ ಪ್ರದೇಶದಲ್ಲಿ ಕಬ್ಬು ಬೆಳೆಗಾರರಿಗೆ ಬಾಕಿ ಮೊತ್ತ ಪಾವತಿಸದ ಕೇಂದ್ರ ಸರ್ಕಾರ ನಡೆ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿಕಾರಿದ್ದಾರೆ.

"ಹೊಸ ಸಂಸತ್​ ನಿರ್ಮಿಸಲು ಬಿಜೆಪಿ ಸರ್ಕಾರವು ರೂ. 20,000 ಕೋಟಿ ವ್ಯಯಿಸುತ್ತಿದೆ. ಪ್ರಧಾನಮಂತ್ರಿಗೆ ವಿಶೇಷ ವಿಮಾನ ಖರೀದಿಸಲು ರೂ. ಸಾವಿರಾರು ಕೋಟಿ ಇದೆ. ಆದರೆ ಯುಪಿ ಕಬ್ಬು ಬೆಳೆಗಾರರಿಗೆ ರೂ. 14,000 ಕೋಟಿ ಬಾಕಿ ಪಾವತಿಸಲು ಹಣವಿಲ್ಲ. ಕಬ್ಬಿನ ಬೆಲೆ 2017ರಿಂದ ಹೆಚ್ಚಾಗಲಿಲ್ಲ. ಈ ಸರ್ಕಾರ ಕೋಟ್ಯಧಿಪತಿಗಳ ಬಗ್ಗೆ ಮಾತ್ರ ಯೋಚಿಸುತ್ತದೆ ”ಎಂದು ಪ್ರಿಯಾಂಕ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

"ಇನ್ನು ಪ್ರಧಾನಿ ನರೇಂದ್ರ ಮೋದಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ನಾಶಪಡಿಸುವ ಮೂಲಕ ರೈತರನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಮಂತ್ರಿಯ ಪ್ರತಿಯೊಂದು ನಿರ್ಧಾರವು ಬಂಡವಾಳಶಾಹಿಗಳಿಗೆ ಲಾಭವನ್ನು ತರುವ ಉದ್ದೇಶವನ್ನು ಹೊಂದಿದೆ. ರೈತರು ಈಗ ಈ ಪಿತೂರಿಯನ್ನು ಅರ್ಥ ಮಾಡಿಕೊಂಡಿದ್ದಾರೆ" ಎಂದು ಪ್ರಿಯಾಂಕ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details