ಕರ್ನಾಟಕ

karnataka

ETV Bharat / bharat

ದೇಶದ ಯುವಶಕ್ತಿಗೆ ಚೈತನ್ಯ ತುಂಬಿದ ಚಳುವಳಿ ಕ್ವಿಟ್‌ ಇಂಡಿಯಾ: ಪ್ರಧಾನಿ ಮೋದಿ ಬಣ್ಣನೆ - ಪ್ರಧಾನಿ ನರೇಂದ್ರ ಮೋದಿ

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತರ ಪಾತ್ರ ವಹಿಸಿದ್ದ ಐತಿಹಾಸಿಕ ಹೋರಾಟ ಕ್ವಿಟ್‌ ಇಂಡಿಯಾ ಚಳುವಳಿಯ 79ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಟ್ವೀಟ್​​ ಮಾಡುವ ಮೂಲಕ ಚಳುವಳಿಯಲ್ಲಿ ಭಾಗವಹಿಸಿ ಮಡಿದ ವೀರರಿಗೆ ನಮನ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

By

Published : Aug 9, 2021, 11:31 AM IST

ನವದೆಹಲಿ:ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿ ಪ್ರಾಣಾರ್ಪಣೆಗೈದ ವೀರರಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​​ ಮೂಲಕ ನಮನ ಸಲ್ಲಿಸಿದ್ದಾರೆ.

ಭಾರತ ಬಿಟ್ಟು ತೊಲಗಿ ಎಂಬ ಐತಿಹಾಸಿಕ ಚಳುವಳಿಯಲ್ಲಿ ಭಾಗವಹಿಸಿದ ಶ್ರೇಷ್ಠರಿಗೆ ಗೌರವಪೂರ್ವಕ ನಮನಗಳು. ಕ್ವಿಟ್ ಇಂಡಿಯಾ ವಸಾಹತುಶಾಹಿ ವಿರುದ್ಧದ ಹೋರಾಟ ಬಲಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.

ಮಹಾತ್ಮ ಗಾಂಧಿಯವರಿಂದ ಪ್ರೇರಿತರಾಗಿ, ಹಲವು ವೀರರು ಈ ಚಳುವಳಿಯಲ್ಲಿ ಚೈತನ್ಯದಿಂದ ಭಾರತದಾದ್ಯಂತ ಹೋರಾಟ ಮಾಡಿದ್ದಾರೆ. ನಮ್ಮ ರಾಷ್ಟ್ರದ ಯುವಜನರಿಗೆ ಶಕ್ತಿ ತುಂಬಿದ ಚಳುವಳಿ ಇದು ಎಂದು ಮೋದಿ ಬಣ್ಣಿಸಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್​ ನಿಧಿ: ರೈತರ ಬ್ಯಾಂಕ್ ಖಾತೆಗಳಿಗೆ ಇಂದು 9ನೇ ಕಂತು ಬಿಡುಗಡೆ

ABOUT THE AUTHOR

...view details