ನವ ದೆಹಲಿ: ಡಿಸೆಂಬರ್ 4 ಮತ್ತು 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಆದಿತ್ಯವಾರದಂದು ರಾಜ್ಯ ಸರ್ಕಾರ ಗೌರವಾರ್ಥವಾಗಿ ಅವರಿಗೆ ಸ್ವಾಗತ ಸಮಾರಂಭ ಆಯೋಜಿಸಿದ್ದು ರಾಷ್ಟ್ರಪತಿಗಳು ಅದರಲ್ಲಿ ಭಾಗವಹಿಸಲಿದ್ದಾರೆ.
ಇಂದು ಸಂಜೆ ನೌಕಾಪಡೆಯ ದಿನದ ಸಲುವಾಗಿ ವಿಶಾಖಪಟ್ಟಣದಲ್ಲಿ ನಡೆಯುವ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಪ್ರದರ್ಶನ ವೀಕ್ಷಿಸಲಿದ್ದಾರೆ. ಜೊತೆಗೆ ರಸ್ತೆ ಸಾರಿಗೆ, ಹೆದ್ದಾರಿಗಳು, ಬುಡಕಟ್ಟು ವ್ಯವಹಾರಗಳು, ಮತ್ತು ರಕ್ಷಣಾ ಸಚಿವಾಲಯಗಳ ಯೋಜನೆಗಳನ್ನು ಅವರು ಉದ್ಘಾಟಿಸುವರು.