ರೋಹ್ಟಾಸ್(ಬಿಹಾರ): ರಾತ್ರಿ ವೇಳೆ ಏಕಾಏಕಿ ಮನೆಯೊಂದಕ್ಕೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಸಿಬ್ಬಂದಿ, ಆಕೆಯ ಕೂದಲು ಹಿಡಿದು ಎಳೆದಾಡಿರುವ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ. ಬಿಹಾರದ ರೋಹ್ಟಾಸ್ನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಅನುಚಿತ ವರ್ತನೆಗೆ ಇದೀಗ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗುತ್ತಿದೆ.
ರೋಹ್ಟಾಸ್ನ ಭಡ್ಸಾಹಳ್ಳಿಗೆ ಸಂಬಂಧಿಸಿರುವ ಘಟನೆ ಇದಾಗಿದೆ. ಗ್ರಾಮದ ರಂಜಿತ್ ಯಾದವ್ ಅಕ್ರಮವಾಗಿ ಮರಳು ತುಂಬಿದ್ದ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿರುವ ಆರೋಪವಿದೆ. ಇದರಿಂದ ಆಕ್ರೋಶಗೊಂಡಿರುವ ಪೊಲೀಸರು, ಯಾವುದೇ ರೀತಿಯ ಅರೆಸ್ಟ್ ವಾರಂಟ್ ಹಾಗೂ ಮಹಿಳಾ ಕಾನ್ಸ್ಟೇಬಲ್ ಇಲ್ಲದೇ ರಂಜಿತ್ ಯಾದವ್ ಮನೆಗೆ ನುಗ್ಗಿದ್ದಾರೆ.