ಕರ್ನಾಟಕ

karnataka

ETV Bharat / bharat

ಬಂಡಿ ಸಂಜಯ್ ಕುಮಾರ್ 'ಪ್ರಜಾ ಸಂಗ್ರಾಮ ಯಾತ್ರೆ'ಗೆ ಅನುಮತಿ ನಿರಾಕರಿಸಿದ ತೆಲಂಗಾಣ ಪೊಲೀಸರು

ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರ ಪ್ರಜಾ ಸಂಗ್ರಾಮ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

BJP state chief Bandi Sanjay Kumar
ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್

By

Published : Nov 28, 2022, 9:10 AM IST

ಹೈದರಾಬಾದ್:ಬಿಜೆಪಿ ರಾಜ್ಯ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರ ಐದನೇ ಹಂತದ 'ಪ್ರಜಾ ಸಂಗ್ರಾಮ ಯಾತ್ರೆ' ಮತ್ತು ನಿರ್ಮಲ್ ಜಿಲ್ಲೆಯ ಭೈಂಸಾ ಪಟ್ಟಣದಲ್ಲಿ ಸಾರ್ವಜನಿಕ ಸಭೆಗೆ ತೆಲಂಗಾಣ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲು ನಿಗದಿಯಾಗಿದ್ದ ಬಿಜೆಪಿ ನಾಯಕರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಸೇರಿದ್ದಾರೆ. ಐದನೇ ಹಂತದ ಪಾದಯಾತ್ರೆಗಾಗಿ ನಿರ್ಮಲ್‌ಗೆ ತೆರಳುತ್ತಿದ್ದ ಕುಮಾರ್ ಅವರನ್ನು ಭಾನುವಾರ ರಾತ್ರಿ ಜಗ್ತಿಯಾಲ್ ಜಿಲ್ಲೆಯಲ್ಲಿ ಪೊಲೀಸರು ತಡೆದು ಹಿಂತಿರುಗುವಂತೆ ತಿಳಿಸಿದ್ದಾರೆ.

ಭೈಂಸಾ ಮತ್ತು ಇತರ ಪ್ರದೇಶಗಳಲ್ಲಿ ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಪರಿಗಣಿಸಿ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಕ್ರಮವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಜಗ್ತಿಯಾಲ್ ಮತ್ತು ನಿರ್ಮಲ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಕೂಡಲೇ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಬಿಜೆಪಿ ತೆಲಂಗಾಣ ಘಟಕ ಅಧ್ಯಕ್ಷ ಬಂಡಿ ಸಂಜಯ್ ಕೊಲೆ ಯತ್ನ ಸುಳ್ಳು ಸುದ್ದಿ: ಹೈದರಾಬಾದ್ ಪೊಲೀಸರ ಸ್ಪಷ್ಟನೆ

ABOUT THE AUTHOR

...view details