ಕರ್ನಾಟಕ

karnataka

By

Published : Sep 1, 2022, 10:21 AM IST

ETV Bharat / bharat

ಇಂದಿನಿಂದ ಕೇರಳ ಪ್ರವಾಸದಲ್ಲಿ ಮೋದಿ: ನಾಳೆ ಸ್ವದೇಶಿ ಐಎನ್​ಎಸ್​​​ ವಿಕ್ರಾಂತ್ ಲೋಕಾರ್ಪಣೆ​​

ಇಂದಿನಿಂದ ದೇವರ ನಾಡು ಕೇರಳ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ, ನಾಳೆ ಸ್ವದೇಶಿ ನಿರ್ಮಿತ ಐಎನ್​​ಎಸ್ ವಿಕ್ರಾಂತ್​​ ಅನಾವರಣಗೊಳಿಸಲಿದ್ದಾರೆ.

Modi Kerala tour
Modi Kerala tour

ಕೊಚ್ಚಿ(ಕೇರಳ): ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಎರಡು ದಿನಗಳ ಕೇರಳ ಪ್ರವಾಸ ಕೈಗೊಳ್ಳಲಿದ್ದು, ಸಂಜೆ ಕೊಚ್ಚಿ ಮೆಟ್ರೋ ಹಂತ-2 ಯೋಜನೆಯ ಶಂಕುಸ್ಥಾಪನೆ ನೆರವೇರಿಸುವರು. ಇದರ ಜೊತೆಗೆ ಮೊದಲನೇ ಹಂತದ ಉದ್ಘಾಟನಾ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗಲಿದ್ದಾರೆ.

ಮುಖ್ಯವಾಗಿ ಭಾರತದಲ್ಲಿ ಮೊದಲ ಬಾರಿಗೆ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ ಅನ್ನು ಪ್ರಧಾನಿ ನಾಳೆ ಲೋಕಾರ್ಪಣೆ ಮಾಡುವರು. ಭಾರತೀಯ ನೌಕಾಪಡೆಯ ಆಂತರಿಕ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದ ಮತ್ತು ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ವಿಕ್ರಾಂತ್ ನಿರ್ಮಿಸಲ್ಪಟ್ಟಿದೆ.

ಐಎನ್​​ಎಸ್​ ವಿಕ್ರಾಂತ್ ವಿಶೇಷತೆ:​ 45 ಸಾವಿರ ಟನ್​​ ಭಾರ ಇರುವ ವಿಕ್ರಾಂತ್ ಯುದ್ಧ ವಿಮಾನ ವಾಹಕ​​​ ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಗೊಂಡಿದೆ. ಸುಮಾರು 12,500 ಚದರ ಮೀಟರ್​​ ವ್ಯಾಪ್ತಿ ಹೊಂದಿದೆ. ಇದಕ್ಕೆ 6 ಹೆಲಿಕಾಪ್ಟರ್​​​ ಮತ್ತು 12 ಫೈಟರ್​​ಜೆಟ್​​ ಹೊರುವ ಸಾಮರ್ಥ್ಯವಿದೆ.

ಇದನ್ನೂ ಓದಿ:ರಾಜ್ಯಕ್ಕೆ ನಾಳೆ ಮೋದಿ, ಇಂದು ಯೋಗಿ; ಬೆಂಗಳೂರಿನಲ್ಲಿ ಕ್ಷೇಮವನ ಉದ್ಘಾಟಿಸಲಿರುವ ಯುಪಿ ಸಿಎಂ

ಆದಿ ಶಂಕರಾಚಾರ್ಯರ ಜನ್ಮಸ್ಥಳಕ್ಕೆ ಭೇಟಿ: ಇಂದು ಸಂಜೆ 6 ಗಂಟೆಗೆ ಕೇರಳಕ್ಕೆ ಆಗಮಿಸಲಿರುವ ನರೇಂದ್ರ ಮೋದಿ ಕೊಚ್ಚಿನ್ ವಿಮಾನ ನಿಲ್ದಾಣದ ಬಳಿಯ ಕಾಲಟಿ ಗ್ರಾಮದಲ್ಲಿರುವ ಆದಿ ಶಂಕರಾಚಾರ್ಯರ ಜನ್ಮಸ್ಥಳವಾದ ಆದಿಶಂಕರ ಜನ್ಮಭೂಮಿ ಕ್ಷೇತ್ರಕ್ಕೆ ಭೇಟಿ ನೀಡುವರು. ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಭಾಷಣ ಮಾಡುವರು.

ABOUT THE AUTHOR

...view details