ಕರ್ನಾಟಕ

karnataka

ETV Bharat / bharat

ಗೋವಿಂದಪುರಿಯ ಕೊಳಗೇರಿ ನಿವಾಸಿಗಳ ಬದುಕಿಗೆ ಹೊಸ ಬೆಳಕು.. ಪ್ರಧಾನಿ ಮೋದಿಯಿಂದ ಫ್ಲ್ಯಾಟ್‌ಗಳ ಹಸ್ತಾಂತರ

ದೆಹಲಿಯ ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಗೋವಿಂದಪುರಿ ಪ್ರದೇಶದಲ್ಲಿ ವಾಸಿಸುವ ಕೊಳಗೇರಿ ನಿವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಲಿದ್ದಾರೆ. ಗೋವಿಂದಪುರಿ ಪೊಲೀಸ್ ಠಾಣೆ ಬಳಿ ನಿರ್ಮಿಸಲಾಗಿರುವ 3024 ಫ್ಲ್ಯಾಟ್‌ಗಳ ಕೀಗಳನ್ನು ಬುಧವಾರ ಫಲಾನುಭವಿಗಳಿಗೆ ಮೋದಿ ನೀಡಲಿದ್ದಾರೆ.

By

Published : Nov 2, 2022, 3:41 PM IST

ಗೋವಿಂದಪುರಿಯಲ್ಲಿ ಫ್ಲ್ಯಾಟ್‌ಗಳ ನಿರ್ಮಾಣ
ಗೋವಿಂದಪುರಿಯಲ್ಲಿ ಫ್ಲ್ಯಾಟ್‌ಗಳ ನಿರ್ಮಾಣ

ನವದೆಹಲಿ:ಇಲ್ಲಿನ ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಗೋವಿಂದಪುರಿ ಪ್ರದೇಶದಲ್ಲಿ ವಾಸಿಸುವ ಕೊಳೆಗೇರಿ ನಿವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಫ್ಲ್ಯಾಟ್‌ನ ಕೀಗಳನ್ನು ಇಂದು ಹಸ್ತಾಂತರಿಸಲಿದ್ದಾರೆ. ಗೋವಿಂದಪುರಿ ಪ್ರದೇಶದ ಗೋವಿಂದಪುರಿ ಪೊಲೀಸ್ ಠಾಣೆ ಬಳಿ ಈ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ. ಇದನ್ನು 345 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಬುಧವಾರ ಸಂಜೆ ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಅವರು ಗೋವಿಂದಪುರಿ ಪ್ರದೇಶದಲ್ಲಿ ಭೂರಹಿತ ಶಿಬಿರಗಳಲ್ಲಿ ವಾಸಿಸುವ ಕೊಳಗೇರಿ ನಿವಾಸಿಗಳಿಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸಲಿದ್ದಾರೆ. ಈ ಫ್ಲ್ಯಾಟ್‌ಗಳನ್ನು ಎರಡು ಕೊಠಡಿಗಳಿಂದ ಮಾಡಲಾಗಿದೆ, ಅವುಗಳ ಸಂಖ್ಯೆ 3024 ಆಗಿದೆ.

ಗೋವಿಂದಪುರಿಯಲ್ಲಿ ಫ್ಲ್ಯಾಟ್‌ಗಳ ನಿರ್ಮಾಣ

ಈ ಕುರಿತು ಫಲಾನುಭವಿ ಸೋನು ಮಾತನಾಡಿ, ನಾವು ಫ್ಲ್ಯಾಟ್ ಪಡೆಯುತ್ತಿದ್ದೇವೆ. ಫ್ಲ್ಯಾಟ್ ಸಿಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ. ಪ್ರಧಾನಿ ಮೋದಿ ಹಾಗೂ ಸಂಸದ ರಮೇಶ್ ಬಿಧುರಿ ಅವರಿಂದಾಗಿ ನಮಗೆ ಈ ಫ್ಲ್ಯಾಟ್ ಸಿಗುತ್ತಿದೆ. ನಾವು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸೋನು ಹೇಳಿದ್ದಾರೆ.

ಸಾವಿರಾರು ಜನ ವಾಸಿಸುವ ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಗೋವಿಂದಪುರಿ ವಾರ್ಡ್ ನಲ್ಲಿ ಮೂರು ಕೊಳಗೇರಿಗಳು ಇವೆ. ಆ ಜನರು ಬಹಳ ಹಿಂದಿನಿಂದಲೂ ಇಲ್ಲಿ ವಾಸಿಸುತ್ತಿದ್ದಾರೆ. ಅದೇ ಕೊಳಗೇರಿ ನಿವಾಸಿಗಳಿಗೆ ಗೋವಿಂದಪುರಿ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ 3024 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ. ಪ್ರಧಾನಿಯವರು ಫಲಾನುಭವಿಗಳಿಗೆ ಇಂದು ಫ್ಲ್ಯಾಟ್​ ಹಸ್ತಾಂತರಿಸಲಿದ್ದಾರೆ.

ಇದನ್ನೂ ಓದಿ:Invest Karnataka 2022.. ಹೂಡಿಕೆಗೆ ಕರ್ನಾಟಕ ಉತ್ತಮ ರಾಜ್ಯ: ಪ್ರಧಾನಿ ಮೋದಿ ಬಣ್ಣನೆ

ABOUT THE AUTHOR

...view details