ಕರ್ನಾಟಕ

karnataka

ಇಂದು ಅಸ್ಸೋಂ, ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಯೋಜನೆಗಳಿಗೆ ಅಡಿಪಾಯ ಹಾಕಲು ಇಂದು ಅಸ್ಸೋಂ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ.

By

Published : Feb 22, 2021, 8:55 AM IST

Published : Feb 22, 2021, 8:55 AM IST

PM Modi to visit poll-bound states Assam, West Bengal today
ಇಂದು ಅಸ್ಸೋಂ, ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ಮೋದಿ ಭೇಟಿ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಇಂದು ಅಸ್ಸೋಂ ಹಾಗೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಇಂದು ಬೆಳಗ್ಗೆ 11:30 ಕ್ಕೆ ಅಸ್ಸೋಂನ ಧೆಮಾಜಿಯ ಸಿಲಾಪಥರ್‌ನಲ್ಲಿ ಆಯೋಜಿಸಿರುವ ತೈಲ ಮತ್ತು ಅನಿಲ ವಲಯದ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಹಲವಾರು ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಅಸ್ಸೋಂನ ಇಂಡಿಯನ್ ಆಯಿಲ್‌ನ ಬೊಂಗೈಗಾಂವ್ ಸಂಸ್ಕರಣಾಗಾರದಲ್ಲಿ ಐಎನ್‌ಡಿಮ್ಯಾಕ್ಸ್ ಘಟಕ, ಮಧುಬನ್​ನ ಆಯಿಲ್ ಇಂಡಿಯಾ ಲಿಮಿಟೆಡ್‌ನ ಸೆಕೆಂಡರಿ ಟ್ಯಾಂಕ್ ಫಾರ್ಮ್, ತಿನ್‌ಸುಕಿಯಾದ ಮಕುಮ್‌ನ ಹೆಬೆಡಾ ಗ್ರಾಮದಲ್ಲಿ ದಿಬ್ರುಗರ್ ಮತ್ತು ಗ್ಯಾಸ್ ಸಂಕೋಚಕ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಧೆಮಾಜಿ ಎಂಜಿನಿಯರಿಂಗ್ ಕಾಲೇಜನ್ನು ಉದ್ಘಾಟಿಸಿ, ಸುವಾಲ್ಕುಚಿ ಎಂಜಿನಿಯರಿಂಗ್ ಕಾಲೇಜಿಗೆ ಅಡಿಪಾಯ ಹಾಕಲಿದ್ದಾರೆ.

ಬೊಂಗೈಗಾಂವ್ ಸಂಸ್ಕರಣಾಗಾರದ ಐಎನ್‌ಡಿಮ್ಯಾಕ್ಸ್ ಘಟಕವು ಭಾರೀ ಫೀಡ್‌ಸ್ಟಾಕ್‌ಗಳಿಂದ ಹೆಚ್ಚಿನ ಎಲ್‌ಪಿಜಿ ಮತ್ತು ಹೈ-ಆಕ್ಟೇನ್ ಗ್ಯಾಸೋಲಿನ್ ಇಳುವರಿಯನ್ನು ಉತ್ಪಾದಿಸಲು ಇಂಡಿಯನ್ ಆಯಿಲ್- ಆರ್ ಆ್ಯಂಡ್ ಡಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನವಾಗಿದೆ. ಈ ಘಟಕವು ಸಂಸ್ಕರಣಾಗಾರದ ಕಚ್ಚಾ ಸಂಸ್ಕರಣಾ ಸಾಮರ್ಥ್ಯವನ್ನು 2.35 ಎಂಎಂಟಿಪಿಎ (ವರ್ಷಕ್ಕೆ ಮಿಲಿಯನ್ ಮೆಟ್ರಿಕ್ ಟನ್) ನಿಂದ 2.7 ಎಂಎಂಟಿಪಿಎಗೆ ಹೆಚ್ಚಿಸುತ್ತದೆ.

ಇದರ ಕಾರ್ಯಾರಂಭವು ಎಲ್‌ಪಿಜಿ ಉತ್ಪಾದನೆಯನ್ನು 50 ಟಿಎಂಟಿ (ಸಾವಿರ ಮೆಟ್ರಿಕ್ ಟನ್) ನಿಂದ 257 ಟಿಎಂಟಿಗೆ ಮತ್ತು ಮೋಟಾರ್ ಸ್ಪಿರಿಟ್ (ಪೆಟ್ರೋಲ್) ಉತ್ಪಾದನೆಯನ್ನು 210 ಟಿಎಂಟಿಯಿಂದ 533 ಟಿಎಂಟಿಗೆ ಹೆಚ್ಚಿಸುತ್ತದೆ.

ನಂತರ ಪಶ್ಚಿಮಬಂಗಾಳಕ್ಕೆ ತೆರಳಲಿರುವ ಪ್ರಧಾನಿ, ಅಲ್ಲಿನ ಹೂಗ್ಲಿಯಲ್ಲಿ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನೊಪಾರದಿಂದ ದಕ್ಷಿಣೇಶ್ವರ ವಿಸ್ತರಣಾ ಮೆಟ್ರೋ ಮಾರ್ಗದ ಸೇವೆಗೆ ಚಾಲನೆ ನೀಡಲಿದ್ದಾರೆ. 4.1 ಕಿ.ಮೀ ಉದ್ದದ ಈ ಮಾರ್ಗವನ್ನು ₹464 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಸಂಪೂರ್ಣ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಲಾಗಿದೆ. ‌ಈ ಮಾರ್ಗವು ದಕ್ಷಿಣೇಶ್ವರದಲ್ಲಿರುವ ಎರಡು ವಿಶ್ವಪ್ರಸಿದ್ಧ ಕಾಳಿ ದೇವಾಲಯಗಳಿಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ.

ಬಳಿಕ ಆಗ್ನೇಯ ರೈಲ್ವೆಯ 132 ಕಿ.ಮೀ ಉದ್ದದ ಖರಗ್‌ಪುರ-ಆದಿತ್ಯಪುರ ಮೂರನೇ ಸಾಲಿನ ಯೋಜನೆಯ 30 ಕಿ.ಮೀ ವಿಸ್ತಾರದಲ್ಲಿ ಕಲೈಕುಂಡ ಮತ್ತು ಜಾರ್ಗ್ರಾಮ್ ನಡುವಿನ ಮೂರನೇ ಮಾರ್ಗವನ್ನು ಪಿಎಂ ಮೋದಿ ಉದ್ಘಾಟಿಸಲಿದ್ದು, ಇದರ ನಿರ್ಮಾಣ ವೆಚ್ಚ 1,312 ಕೋಟಿ ರೂ. ಆಗಿದೆ.

ABOUT THE AUTHOR

...view details