ನವಸಾರಿ(ಗುಜರಾತ್):ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ಪ್ರವಾಸ ಯಾವುದೋ ಒಂದು ಕಾರಣಕ್ಕಾಗಿ ಪ್ರತಿ ಸಲವೂ ವಿಶೇಷವಾಗಿರುತ್ತದೆ. ಈ ಸಲದ ಅವರ ಮಾತೃ ನೆಲದ ಪ್ರವಾಸ ಕೂಡ ವಿಭಿನ್ನ ಕಾರಣಕ್ಕಾಗಿ ಮುನ್ನೆಲೆಗೆ ಬಂದಿದೆ. ಒಂದು ದಿನದ ಗುಜರಾತ್ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದು, ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರಿಗೆ ಸಿಕ್ಕ ಸಮಯದಲ್ಲಿ ಶಾಲಾ ಶಿಕ್ಷಕರನ್ನ ಭೇಟಿ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದಾಗಿ ತಿಳಿದು ಬಂದಿದೆ.
ಗುಜರಾತ್ನ ನವಸಾರಿಯ ವಡ್ನಗರದಲ್ಲಿ ತಮ್ಮ ಶಾಲಾ ಶಿಕ್ಷಕರನ್ನ ಭೇಟಿ ಮಾಡಿದ ನಮೋ, ಆಶೀರ್ವಾದ ಪಡೆದುಕೊಂಡರು. ಶಾಲಾ ಶಿಕ್ಷಕರಾದ ಜಗದೀಶ್ ನಾಯ್ಕ್ ಎಂಬುವವರನ್ನ ಭೇಟಿ ಮಾಡಿರುವ ನಮೋ, ಕೈ ಮುಗಿದು ನಮಸ್ಕಾರ ಮಾಡುತ್ತಿದ್ದಾರೆ. ಗಾಂಧಿ ಟೋಪಿ ಧರಿಸಿ ಮತ್ತು ಬಿಳಿ ಅಂಗಿ ಧರಿಸಿರುವ ಜಗದೀಶ್ ನಾಯಕ್ ಅವರು ಪ್ರಧಾನಿ ಮೋದಿಯೊಂದಿಗಿನ ಭೇಟಿಯ ಸಮಯದಲ್ಲಿ ಹರ್ಷಚಿತ್ತದಿಂದ ಕಾಣುತ್ತಿದ್ದಾರೆ.