ಕರ್ನಾಟಕ

karnataka

ಅಮೆರಿಕಕ್ಕೆ 245ನೇ ಸ್ವಾತಂತ್ರೋತ್ಸವ ಸಂಭ್ರಮ: ಪ್ರಧಾನಿ ಮೋದಿ ಶುಭಾಶಯ

By

Published : Jul 4, 2021, 3:19 PM IST

ಇಂದು ಅಮೆರಿಕ ದೇಶದ​ ಜನತೆಗೆ 245ನೇ ಸ್ವಾತಂತ್ರ್ಯ ದಿನದ ಸಂಭ್ರಮ. ಈ ವೇಳೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ.

PM Modi greets President Biden on 245th Independence Day of US
ಅಮೆರಿಕದ 245 ನೇ ಸ್ವಾತಂತ್ರ್ಯ ದಿನಾಚರಣೆ

ನವದೆಹಲಿ:ಅಮೆರಿಕದ 245ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್​ ಅಧ್ಯಕ್ಷ ಜೋ ಬೈಡನ್ ಮತ್ತು ಅಮೆರಿಕದ ಜನರಿಗೆ ಶುಭ ಕೋರಿದ್ದಾರೆ.

ಭಾರತ ಮತ್ತು ಅಮೆರಿಕ ದೇಶಗಳು ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ. ಅವುಗಳ ಕಾರ್ಯತಂತ್ರದ ಸಹಭಾಗಿತ್ವವು ನಿಜವಾದ ಜಾಗತಿಕ ಮಹತ್ವವನ್ನು ಹೊಂದಿದೆ ಎಂದು ಮೋದಿ ಟ್ವೀಟ್‌ನಲ್ಲಿ ಬಣ್ಣಿಸಿದ್ದಾರೆ.

ಅಮೆರಿಕ ಪ್ರತಿ ವರ್ಷ ಜುಲೈ 4 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. 1776ರ ಜುಲೈ 4 ರಂದು ಅಮೆರಿಕದಲ್ಲಿ ಎರಡನೇ 'ಕಾಂಟಿನೆಂಟಲ್ ಕಾಂಗ್ರೆಸ್' ಸಮಾವೇಶದಲ್ಲಿ ಸ್ವಾತಂತ್ರ್ಯ ಘೋಷಣೆಯನ್ನು ಅಂಗೀಕರಿಸಲಾಗಿತ್ತು. ಅಂದು ಅಮೆರಿಕ ಸಂಯುಕ್ತ ರಾಜ್ಯಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಜುಲೈ 4 ಅನ್ನು ಸ್ವಾತಂತ್ರ್ಯ ದಿನವನ್ನಾಗಿ ಯುಎಸ್​ ಜನತೆ ಆಚರಿಸುತ್ತಾರೆ.

ABOUT THE AUTHOR

...view details