ಕರ್ನಾಟಕ

karnataka

ETV Bharat / bharat

ಭಾರತದ ಜೊತೆ £1 ಬಿಲಿಯನ್ ಹೂಡಿಕೆ ಒಪ್ಪಂದ ಘೋಷಿಸಿದ ಬ್ರಿಟನ್‌ ಪ್ರಧಾನಿ! - ಭಾರತದಲ್ಲಿ ಹೊಸ ಒಪ್ಪಂದ ಘೋಷಿಸಿದ ಬ್ರಿಟಿಷ್ ಪ್ರಧಾನಿ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ ಭಾರತದಲ್ಲಿ 1 ಬಿಲಿಯನ್ ಪೌಂಡ್‌ ಹೂಡಿಕೆಯ ಒಪ್ಪಂದವನ್ನು ಘೋಷಣೆ ಮಾಡಿದ್ದಾರೆ.

PM Boris Johnson announces new deals
PM Boris Johnson announces new deals

By

Published : Apr 21, 2022, 5:40 PM IST

ಅಹಮದಾಬಾದ್​​(ಗುಜರಾತ್​):ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್​ ಮಹತ್ವದ ಘೋಷಣೆ ಹೊರಹಾಕಿದ್ದು, ಭಾರತದಲ್ಲಿ ಒಂದು ಬಿಲಿಯನ್ ಪೌಂಡ್‌ ಹೂಡಿಕೆ ಮಾಡುವ ಘೋಷಣೆ ಮಾಡಿದ್ದಾರೆ. ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನದಲ್ಲಿ ಇಷ್ಟೊಂದು ಮೊತ್ತ ಹೂಡಿಕೆ ಮಾಡುವ ಒಪ್ಪಂದವನ್ನು ಅವರು ಪ್ರಕಟಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ಹೈಕಮಿಷನ್​ ಪ್ರಕಟಣೆ ಹೊರಡಿಸಿದ್ದು, ಭಾರತದೊಂದಿಗೆ ಬಾಂಧವ್ಯ ವೃದ್ಧಿಸಲು ಬೋರಿಸ್ ಜಾನ್ಸನ್ ಭಾರತಕ್ಕೆ ಭೇಟಿ ನೀಡಿದ್ದು, ಉಭಯ ದೇಶಗಳು ಅನೇಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಿವೆ ಎಂದಿದೆ. ಸಾಫ್ಟ್‌ವೇರ್ ಇಂಜಿನಿಯರಿಂಗ್​​ನಿಂದ ಹಿಡಿದು ಆರೋಗ್ಯ ಕ್ಷೇತ್ರದವರೆಗೆ ಇದೀಗ ಬ್ರಿಟನ್ ಹೂಡಿಕೆ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ £1 ಬಿಲಿಯನ್​ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದಿದ್ದು, ಇದರಿಂದ 11,000 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ.

ಇದನ್ನೂ ಓದಿ:ವಿಡಿಯೋ: ವಡೋದರಾದ ಬುಲ್ಡೋಜರ್​ ಪ್ಲಾಂಟ್‌ನಲ್ಲಿ ಜೆಸಿಬಿ ಏರಿ ಕುಳಿತ ಬ್ರಿಟಿಷ್‌ ಪ್ರಧಾನಿ

ಬ್ರಿಟಿಷ್ ಪ್ರಧಾನಿ ಇಂದು ಗುಜರಾತ್​​ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ನಾಳೆ ದೆಹಲಿಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ.

ABOUT THE AUTHOR

...view details