ಕರ್ನಾಟಕ

karnataka

ETV Bharat / bharat

ವಾಹನ ಸವಾರರಿಗೆ ಅಲ್ಪ ರಿಲೀಫ್​: ಪೈಸೆ ಲೆಕ್ಕದಲ್ಲಿ ಇಳಿಕೆ ಕಂಡ ಪೆಟ್ರೋಲ್​, ಡೀಸೆಲ್​ - ಕಚ್ಚಾ ತೈಲದ ಬೆಲೆ ಇಳಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾದ ಹಿನ್ನೆಲೆ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಕೊಂಚ ಇಳಿಕೆ ಕಂಡಿದೆ.

Petrol price cut
ವಾಹನ ಸವಾರರಿಗೆ ಗುಡ್​ ನ್ಯೂಸ್

By

Published : Mar 24, 2021, 12:08 PM IST

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆ ಹಿನ್ನೆಲೆ ಬುಧವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 18 ಪೈಸೆ ಮತ್ತು ಡೀಸೆಲ್​ ಲೀಟರ್‌ಗೆ 17 ಪೈಸೆ ಕಡಿತಗೊಂಡಿದೆ.

ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಪ್ರತೀ ಲೀಟರ್​ಗೆ 91.17 ರೂ ಇದ್ದ ಪೆಟ್ರೋಲ್​ ಬೆಲೆ ಇದೀಗ 18 ಪೈಸೆಯಷ್ಟು ಕಡಿತಗೊಂಡು 90.99 ರೂ ಆಗಿದೆ. ಲೀಟರ್​ಗೆ ರೂ. 81.47 ಇದ್ದ ಡೀಸೆಲ್​ ಇಂದು 81.30 ರೂಗೆ ಇಳಿದಿದೆ.

ದೇಶಾದ್ಯಂತ ಇಂಧನ ದರಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಸ್ಥಳೀಯವಾಗಿ VAT ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಅದರ ಬೆಲೆಗಳು ಬದಲಾಗುತ್ತವೆ. ಒಂದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಂಧನ ಬೆಲೆ ಕಡಿಮೆಯಾಗಿದೆ. ಕೊನೆಯದಾಗಿ ಪೆಟ್ರೋಲ್​ ಡೀಸೆಲ್​ ಬೆಲೆಯನ್ನು ಮಾರ್ಚ್ 16, 2020 ರಂದು ಕಡಿಮೆಗೊಳಿಸಲಾಗಿತ್ತು.

ಪರಿಷ್ಕೃತ ದರದ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರ 90.99 ರೂಪಾಯಿ, ಡೀಸೆಲ್ ದರ 81.30 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀ.ಗೆ 97.39 ಮತ್ತು ಡೀಸೆಲ್ ದರ ಪ್ರತಿ ಲೀ.ಗೆ 88.43 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀ.ಗೆ 97.40 ಮತ್ತು ಡೀಸೆಲ್ ದರ ಪ್ರತಿ ಲೀ.ಗೆ 88.60 ರೂಪಾಯಿ ಇದೆ.

ABOUT THE AUTHOR

...view details