ಕರ್ನಾಟಕ

karnataka

ETV Bharat / bharat

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಪೆಟ್ರೋಲ್ - ಡೀಸೆಲ್ ದರ ಇಂತಿದೆ..! - ತೈಲ ದರ

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್​ - ಡೀಸೆಲ್ ದರ ಈ ಕೆಳಕಂಡಂತಿವೆ.

ಪೆಟ್ರೋಲ್-ಡೀಸೆಲ್
ಪೆಟ್ರೋಲ್-ಡೀಸೆಲ್

By

Published : Sep 28, 2021, 9:49 AM IST

ನವದೆಹಲಿ: ಇಂದು ಪೆಟ್ರೋಲ್ ಬೆಲೆಯು ಪ್ರತಿ ಲೀಟರ್​ಗೆ 19 ರಿಂದ 25 ಪೈಸೆ ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ತೈಲ ಬೆಲೆ ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ಏರಿದೆ. ಜುಲೈ 17 ರ ನಂತರ ಇಂಧನ ಬೆಲೆಯಲ್ಲಿ ಇದು ಮೊದಲ ಹೆಚ್ಚಳವಾಗಿದೆ.

ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 24 ರಿಂದ 27 ಪೈಸೆಯಷ್ಟು ಹೆಚ್ಚಳವಾಗಿದೆ. ಇದು ಕಳೆದ ವಾರದಿಂದ ನಾಲ್ಕನೇ ಬಾರಿ ಆದ ಹೆಚ್ಚಳವಾಗಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್​ಗೆ 21 ಪೈಸೆ ಹೆಚ್ಚಾಗಿದ್ದು, 107.47 ರೂ. ಆಗಿದೆ. ಡೀಸೆಲ್​ ದರ 27 ಪೈಸೆ ಏರಿಕೆಯಾಗಿದ್ದು, ಲೀಟರ್ ಡೀಸೆಲ್ ದರ 97.21 ರೂ.ನಷ್ಟಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ 20 ಪೈಸೆ ಹೆಚ್ಚಾಗಿದ್ದು, 101.39 ರೂ. ಆಗಿದೆ. ಡೀಸೆಲ್ ದರ 25 ಪೈಸೆ ಹೆಚ್ಚಾಗಿದ್ದು, ಲೀಟರ್ ಡೀಸೆಲ್​ಗೆ 89.57 ರೂಪಾಯಿಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 20 ಪೈಸೆ ಹೆಚ್ಚಳವಾಗಿದ್ದು, 101.87 ರೂಪಾಯಿಯಷ್ಟಿದೆ. ಡೀಸೆಲ್ ದರ 25 ಪೈಸೆ ಹೆಚ್ಚಳವಾಗಿದ್ದು, ಲೀಟರ್ ದರ 92.67 ರೂಪಾಯಿನಷ್ಟಿದೆ.

ಬೆಂಗಳೂರಿನಲ್ಲಿ ಇಂದಿನ ದರವೆಷ್ಟು?

ಬೆಂಗಳೂರಿನಲ್ಲಿ ಪೆಟ್ರೋಲ್​ ದರ 13 ಪೈಸೆ ಹೆಚ್ಚಳವಾಗಿದ್ದು, ಲೀಟರ್ ದರ 104.84 ಪೈಸೆಯಾಗಿದೆ. ಸದ್ಯ ಲೀಟರ್​​ ಡೀಸೆಲ್ ದರ​​ 94.19 ರೂಪಾಯಿಯಷ್ಟಿದೆ. ಜಾಗತಿಕ ಉತ್ಪಾದನಾ ಅಡಚಣೆಗಳಿಂದಾಗಿ ಅಂತಾರಾಷ್ಟ್ರೀಯ ತೈಲ ಬೆಲೆ ಸುಮಾರು ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಅಂತೆಯೇ, ಅಮೆರಿಕ ಕಚ್ಚಾ ತೈಲ ದಾಸ್ತಾನು ಮಟ್ಟಗಳು ಸಹ ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ.

ಕಚ್ಚಾತೈಲದ ಬೇಡಿಕೆ ನಿರಂತರ ಹೆಚ್ಚಳ

ಕೋವಿಡ್ ನಿಯಮಗಳ ಸಡಿಲಿಕೆ, ವ್ಯಾಕ್ಸಿನೇಷನ್ ವೇಗಗೊಳ್ಳುತ್ತಿರುವುದರಿಂದ ಕಚ್ಚಾ ತೈಲದ ಜಾಗತಿಕ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಜತೆಗೆ ಇಡಾ ಮತ್ತು ನಿಕೋಲಸ್​ ಚಂಡಮಾರುತಗಳು ಅಮೆರಿಕದ ಕೊಲ್ಲಿ ಆಫ್​ ಮೆಕ್ಸಿಕೋ ಪ್ರದೇಶದಲ್ಲಿ ಕಚ್ಚಾ ತೈಲ ಉತ್ಪಾದನೆಯ ಮೇಲೆ ಭಾರಿ ಪರಿಣಾಮ ಬೀರಿದೆ.

IEA ಮತ್ತು OPEC ಪ್ರಕಾರ, ಜಾಗತಿಕ ಬೇಡಿಕೆಯು ಪೂರೈಕೆಗಿಂತ ಜಾಸ್ತಿಯಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ತೈಲ ಬೆಲೆಗಳು ಮಧ್ಯಾವಧಿಯಲ್ಲಿ ಸ್ಥಿರವಾಗಿರುತ್ತವೆ. ನೈಸರ್ಗಿಕ ಅನಿಲದ ಏಕಕಾಲಿಕ ರ‍್ಯಾಲಿ ಕೂಡ ಪರ್ಯಾಯ ಇಂಧನಗಳ ಬೇಡಿಕೆ ಹೆಚ್ಚಿಸುತ್ತದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (BPCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (HPCL) ಸೆಪ್ಟೆಂಬರ್ 5 ರಿಂದ ದರಗಳ ವಿರಾಮ ಕೊನೆಗೊಳಿಸಿ ಸೆಪ್ಟೆಂಬರ್ 24 ರಂದು ದೈನಂದಿನ ಬೆಲೆ ಪರಿಷ್ಕರಣೆ ಪುನಾರಂಭಿಸಿವೆ.

ABOUT THE AUTHOR

...view details