ಕರ್ನಾಟಕ

karnataka

ETV Bharat / bharat

ಜೇನು ಕುಟುಕುನಿಂದ ಭಾರಿ ಆದಾಯಗಳಿಸಿದ ಯುವಕ: ಗ್ರಾಂಗಳಷ್ಟು ತೂಕಕ್ಕೆ ಲಕ್ಷ ಲಕ್ಷ ರೂ... ಎಲ್ಲಿ ಅಂತೀರಾ? - ಜೇನು ಕುಟುಕುನಿಂದ ಭಾರಿ ಆದಾಯ

ನಿಶಾಂತ್ ಎಂಬುವರು ಬೀ ಸ್ಟಿಂಗ್ ಬ್ಯುಸಿನೆಸ್ ಆರಂಭಿಸಿದ್ದಾರೆ. ಬಹುಶಃ ರಾಜ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ವ್ಯಕ್ತಿ ಇವರೇ ಎನ್ನಲಾಗಿದೆ. ಈ ಕುಟುಕುಗಳ ವಿಶೇಷತೆ ಎಂದರೆ ರೋಗಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತಿದೆಯಂತೆ. ಇದು ಗೌಟ್(Gout) ಅನ್ನು ಗುಣಪಡಿಸುವಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ.

ಜೇನುನೊಣಗಳನ್ನು ಮನುಷ್ಯನ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ
ಜೇನುನೊಣಗಳನ್ನು ಮನುಷ್ಯನ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ

By

Published : May 27, 2022, 11:02 PM IST

ಪಾಟ್ನಾ: ಜೇನುನೊಣಗಳನ್ನು ಮನುಷ್ಯನ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ. ಇವುಗಳಿಂದ ಸಿಗುವ ಜೇನು ಮಕರಂದ. ಆದರೆ, ಈ ಜೇನುನೊಣಗಳಿಂದ ನಿರ್ಮಾಣ ಆಗುವ ಮೇಣದಿಂದ ಈಗ ದೊಡ್ಡ ಬ್ಯುಸಿನೆಸ್​ ಮಾಡಿಕೊಳ್ಳಲಾಗಿದೆ. ಇದನ್ನು ಕೇಳಲು ಸ್ವಲ್ಪ ವಿಚಿತ್ರ ಅನ್ನಿಸಿದರೂ ಸತ್ಯ. ಅಸಲಿಗೆ, ರಾಜಧಾನಿ ಪಾಟ್ನಾದ ಯುವಕ ನಿಶಾಂತ್ ಈ ಜೇನುನೊಣಗಳ ಕುಟುಕುಗಳನ್ನು ಬಳಸಲಾರಂಭಿಸಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ.

ನೋವಿಗೆ ಮದ್ದು:ನಿಶಾಂತ್ ಎಂಬುವರು ಬೀ ಸ್ಟಿಂಗ್ ಬ್ಯುಸಿನೆಸ್ ಆರಂಭಿಸಿದ್ದಾರೆ. ಬಹುಶಃ ರಾಜ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ವ್ಯಕ್ತಿ ಇವರೇ ಎನ್ನಲಾಗಿದೆ. ಈ ಕುಟುಕುಗಳ ವಿಶೇಷತೆ ಎಂದರೆ ರೋಗಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತಿದೆಯಂತೆ. ಇದು ಗೌಟ್(Gout) ಅನ್ನು ಗುಣಪಡಿಸುವಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಹಾಗೆಯೇ ಅನೇಕ ರೀತಿಯ ಚರ್ಮ ರೋಗಗಳು, ಸಂಧಿವಾತ ನಿಯಂತ್ರಣಕ್ಕೆ ತರಲು ಈ ಕುಟುಕಿನ ಪ್ರಾಯೋಗಿಕ ಬಳಕೆಯನ್ನು ಸಹ ಮಾಡಲಾಗುತ್ತಿದೆ.

ಯುರೋಪ್ ದೇಶದಲ್ಲಿ ಬೇಡಿಕೆ: ಇದೇನು ಹೊಸದೇನಲ್ಲ ಎನ್ನುತ್ತಾರೆ ನಿಶಾಂತ್. ವಾಸ್ತವವಾಗಿ ಇದನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ದೇಶದಲ್ಲಿ ಆಗಬೇಕಾದ ರೀತಿಯಲ್ಲಿ ಜನಪ್ರಿಯವಾಗಿಲ್ಲ. ಕುಟುಕುಗಳನ್ನು ಔಷಧವಾಗಿ ಸಂಗ್ರಹಿಸುವ ಕೆಲಸ ತನ್ನ ದೇಶದಲ್ಲಿ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ನಿಶಾಂತ್ ವಿವರಿಸುತ್ತಾರೆ. ಆದರೆ, ಇದು ಈಗಾಗಲೇ ಯುರೋಪಿಯನ್ ದೇಶಗಳು ಮತ್ತು ಅಮೆರಿಕದಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಉತ್ತಮ ಬೆಲೆಯೂ ಇದೆ.

ನಿಶಾಂತ್ ಮೆಕ್ಯಾನಿಕಲ್ ಇಂಜಿನಿಯರಿಂಗ್: ಕುಟುಕು ತೆಗೆಯುವುದನ್ನು ಕರಗತ ಮಾಡಿಕೊಂಡಿರುವ ನಿಶಾಂತ್ ಜರ್ಮನಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಾನು ಅಲ್ಲಿದ್ದಾಗ ಈ ಕೆಲಸವನ್ನು ನೋಡಿದೆ. ಅಲ್ಲಿದ್ದವರಿಗೆ ಇದು ಹೊಸದೇನೂ ಅಲ್ಲ ಎಂದಿದ್ದಾರೆ. ಈ ಕುಟುಕು ತೆಗೆಯಲು ಎಷ್ಟು ಶ್ರಮ ಪಡಬೇಕೋ ಅಷ್ಟು ದುಬಾರಿ ಈ ಕುಟುಕು. ಕಳೆದ ಎರಡು ವರ್ಷಗಳಲ್ಲಿ ಒಂದು ಕಿಲೋ ಕುಟುಕನ್ನು ಮಾರುಕಟ್ಟೆಗೆ ಮಾರಿ ಒಂದು ಕೋಟಿ 20 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರಂತೆ ನಿಶಾಂತ್​ .

ನಿಶಾಂತ್ ಬಳಿಯಿರುವ ಯಂತ್ರವನ್ನು 10 ಬಾಕ್ಸ್‌ಗಳ ಮೇಲೆ ಒಂದು ಯಂತ್ರ ಅಳವಡಿಸಲಾಗಿದೆ. ಜೇನುನೊಣಗಳು ಈ ಯಂತ್ರದ ಮೇಲೆ ಕುಳಿತಾಗ ಅವುಗಳಿಗೆ 12 ವೋಲ್ಟ್‌ಗಳವರೆಗೆ ವಿದ್ಯುತ್ ಶಾಕ್​ ನೀಡಲಾಗುತ್ತದೆ. ಇದರಿಂದಾಗಿ ಕೋಪಗೊಂಡು ಅವು ಕುಟುಕು ವಿಷವನ್ನು ಬಿಡುಗಡೆ ಮಾಡುತ್ತವಂತೆ. ಇಲ್ಲಿ ಅಳವಡಿಸಲಾದ ತಟ್ಟೆಯ ಸಹಾಯದಿಂದ 2.5 ರಿಂದ 3 ಗ್ರಾಂಗಳಷ್ಟು ಕುಟುಕು ವಿಷವನ್ನು 10 ಪೆಟ್ಟಿಗೆಗಳಿಂದ ಒಮ್ಮೆಗೆ ಹೊರ ತೆಗೆಯಲಾಗುತ್ತದಂತೆ.

ಜೇನುನೊಣಗಳಿಂದ ತಯಾರಿಸಿದ ಇತರ ಉತ್ಪನ್ನಗಳು: ಇಷ್ಟೇ ಅಲ್ಲ, ಜೇನುನೊಣಗಳಿಂದ ಪರಾಗ, ಪ್ಯಾರಾಪೋಲಿಸ್, ರಾಯಲ್ ಜೆಲ್ಲಿ ಮತ್ತು ಬೀ ವ್ಯಾಕ್ಸ್ ಅನ್ನು ಕೂಡ ನಿಶಾಂತ್ ತಯಾರಿಸುತ್ತಿದ್ದಾರೆ. ಇದುವರೆಗೆ ಸುಮಾರು 350 ಜೇನು ಕೃಷಿಕರಿಗೆ ಉದ್ಯೋಗ ನೀಡಿದ್ದಾರೆ.

ಕುಟುಕಿನಲ್ಲಿ ಕಂಡುಬರುವ ವಿಶೇಷ ವಸ್ತುವು ವಿಭಿನ್ನವಾಗಿದೆ: ವಾಸ್ತವವಾಗಿ ಈ ಕುಟುಕುಗಳು ವಿಶೇಷ ವಸ್ತುವನ್ನು ಹೊಂದಿರುತ್ತವೆ, ಇದು ಅಪಿಟಾಕ್ಸಿನ್ ಎಂಬ ವಿಷವಾಗಿದೆ. ಸಂಧಿವಾತದ ಚಿಕಿತ್ಸೆಯಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಇದಲ್ಲದೇ, ಈ ಎಪಿಟಾಕ್ಸಿನ್ ಅನ್ನು ಚರ್ಮ ರೋಗಗಳು ಮತ್ತು ಸಂಧಿವಾತವನ್ನು ತೊಡೆದುಹಾಕಲು ಸಹ ಬಳಸಲಾಗುತ್ತದೆ.

ಸ್ವಿಟ್ಜರ್ಲೆಂಡ್ ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸುತ್ತಿದೆ. ಅವರ ಸಂಶೋಧನೆಯ ಪ್ರಕಾರ, ಸಂಧಿವಾತ ಕಾಯಿಲೆಯಲ್ಲಿ ಇದು ವಿಶೇಷ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.

ABOUT THE AUTHOR

...view details