ಕರ್ನಾಟಕ

karnataka

ETV Bharat / bharat

ರಾತ್ರಿ ಹೊತ್ತು ಮಹಿಳಾ ರಿಕ್ಷಾ ಏರಿ ಲೈಂಗಿಕ ಹಿಂಸೆ: ಬೆತ್ತಲಾಗಿ ಚಾಲಕಿಯ ಬೆನ್ನಟ್ಟಿದ ಕಾಮುಕ - ಬೆತ್ತಲಾಗಿ ಮಹಿಳೆಯನ್ನು ಬೆನ್ನಟ್ಟಿ

ಮಹಾರಾಷ್ಟ್ರದಲ್ಲಿ ಕಾಮುಕನೋರ್ವನ ದುಷ್ಕೃತ್ಯ ಬಯಲಾಗಿದೆ. ಪ್ರಯಾಣಿಕನ ಸೋಗಿನಲ್ಲಿ ಮಹಿಳಾ ರಿಕ್ಷಾ ಏರಿ, ಆ ಚಾಲಕಿಗೆ ಲೈಂಗಿಕ ಹಿಂಸೆ ಕೊಟ್ಟಿದ್ದಾನೆ. ಇದರಿಂದ ಆಕೆ ರಾತ್ರಿ ತಪ್ಪಿಸಿಕೊಂಡು ಓಡಿ ಹೋಗಿ ತನ್ನ ಮಾನ-ಪ್ರಾಣ ಉಳಿಸಿಕೊಂಡಿದ್ದಾಳೆ.

a-passenger-chased-female-rickshaw-driver-by-getting-naked-in-pune
ರಾತ್ರಿ ಹೊತ್ತು ಮಹಿಳಾ ರಿಕ್ಷಾ ಏರಿ ಲೈಂಗಿಕ ಹಿಂಸೆ: ಬೆತ್ತಲಾಗಿ ಚಾಲಕಿಯ ಬೆನ್ನಟ್ಟಿದ ಕಾಮುಕ

By

Published : Dec 30, 2022, 9:46 PM IST

ಪುಣೆ (ಮಹಾರಾಷ್ಟ್ರ): ಪ್ರಯಾಣಿಕನೊಬ್ಬ ತನ್ನ ಬಟ್ಟೆಯನ್ನೆಲ್ಲ ಕಳಚಿ ರಿಕ್ಷಾ ಚಾಲಕಿಯ ಬೆನ್ನಟ್ಟಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಹಾರಾಷ್ಟ್ರ ಪುಣೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ 30 ವರ್ಷದ ಆರೋಪಿ ನಿಖಿಲ್ ಅಶೋಕ್ ಮೆಮ್ಜಾದೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಕಟ್ರಾಜ್ ಘಾಟ್‌ನಲ್ಲಿ ಡಿ.26ರ ರಾತ್ರಿ ಹತ್ತು ಗಂಟೆ ಸುಮಾರಿಗೆ ಆರೋಪಿಯು 38 ವರ್ಷದ ಮಹಿಳೆಯ ರಿಕ್ಷಾದಲ್ಲಿ ಹತ್ತಿ ಕುಳಿತಿದ್ದ. ನಂತರ ಲಾಡ್ಜಿಂಗ್ ಬೋರ್ಡ್​​ ಹತ್ತಿರ ರಿಕ್ಷಾ ನಿಲ್ಲಿಸುವಂತೆ ಹೇಳಿದ್ದಾನೆ. ಅಲ್ಲಿಂದ ಆಟೋದಲ್ಲೇ ಅನುಚಿತವಾಗಿ ವರ್ತಿಸಲು ಶುರು ಮಾಡಿ, ಮಹಿಳೆಗೆ ಬಲವಂತವಾಗಿ ತನ್ನ ಬಳಿಯಿದ್ದ ಊಟ ನೀಡಲು ಮುಂದಾಗಿದ್ದಾನೆ. ಅಲ್ಲದೇ, ನಾನು ಇಲ್ಲಿಯೇ ನಿನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸುತ್ತೇನೆ ಎಂದು ಕಾಮುಕ ಕಾಟ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಷ್ಟೇ ಅಲ್ಲ, ಈ ಕತ್ತಲೆಯಲ್ಲಿ ಯಾರೂ ನಿನ್ನ ಕೂಡ ಸಹಾಯಕ್ಕೆ ಬರುವುದಿಲ್ಲ. ನಿನಗೆ ಏನು ಬೇಕೋ ಅದನ್ನು ಮಾಡು ಎಂದು ಆರೋಪಿ ತನ್ನ ಬಟ್ಟೆಯನ್ನೆಲ್ಲ ತೆಗೆದು ಮಹಿಳೆಯ ಪಕ್ಕದಲ್ಲಿ ಕುಳಿತಿದ್ದಾನೆ. ಇದೆಲ್ಲದರಿಂದ ಹೆದರಿದ ಮಹಿಳೆ ರಿಕ್ಷಾದಿಂದ ಇಳಿದು ಓಡತೊಡಗಿದ್ದಾಳೆ. ಆ ನಂತರ ಆರೋಪಿಯು ಬೆತ್ತಲಾಗಿ ಮಹಿಳೆಯನ್ನು ಬೆನ್ನಟ್ಟಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ನೊಂದ ಮಹಿಳೆ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಭಾರತಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೈಕ್​ ಟ್ಯಾಂಕ್​ ಮೇಲೆ ಯುವತಿ ಕೂರಿಸಿಕೊಂಡು ಜಾಲಿ ರೈಡ್: ಜೋಡಿ ಪೊಲೀಸ್ ವಶಕ್ಕೆ

ABOUT THE AUTHOR

...view details