ಜೋಧ್ಪುರ (ರಾಜಸ್ಥಾನ): ಗುರುವಾರದಿಂದ ಭಾರತೀಯ ಅರೆಸೇನಾ ಪಡೆಯ ಕ್ಯಾಪ್ಟನ್ ಅಂಕಿತ್ ಗುಪ್ತಾ ಕಾಣೆಯಾಗಿದ್ದು, ಮೂರನೇ ದಿನ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಜನವರಿ 7 ರಂದು ರಾಜಸ್ಥಾನದ ಜೋಧ್ಪುರದ ಸರೋವರದಲ್ಲಿ (ತಖಾಟ್ ಸಾಗರ್) ಸೇನಾ ಪಡೆ ತಾಲೀಮು ನಡೆಸುತ್ತಿತ್ತು. ಹೆಲಿಕಾಪ್ಟರ್ನಿಂದ ಸರೋವರಕ್ಕೆ ನಾಲ್ವರು ಜಿಗಿದಿದ್ದು, ಮೂವರು ಮಾತ್ರ ಬೋಟ್ ಹತ್ತಿದ್ದಾರೆ. ಆದರೆ, ಅಂಕಿತ್ ಗುಪ್ತಾ ಮಾತ್ರ ನಾಪತ್ತೆಯಾಗಿದ್ದಾರೆ.