ಕರ್ನಾಟಕ

karnataka

ETV Bharat / bharat

2030ರ ವೇಳೆಗೆ 18 ಮಿಲಿಯನ್ ಭಾರತೀಯರು ಹೊಸ ಉದ್ಯೋಗಕ್ಕೆ ಬದಲಾಗ್ತಾರಂತೆ!!

ಚಿಲ್ಲರೆ ವ್ಯಾಪಾರ, ಆಹಾರ ಸೇವೆಗಳು, ಹಾಸ್ಪಿಟಾಲಿಟಿ ಮತ್ತು ಕಚೇರಿ ಆಡಳಿತದಲ್ಲಿ ಕಡಿಮೆ ಕೂಲಿ ಕಾರ್ಮಿಕರ ಮೇಲೆ, ಕೋವಿಡ್​ ಹೆಚ್ಚಿನ ಪ್ರಮಾಣದಲ್ಲಿ ಬೀರುತ್ತದೆ ಎಂದು ಥಿಂಕ್-ಟ್ಯಾಂಕ್ ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ ವರದಿ ಮಾಡಿದೆ.

By

Published : Feb 19, 2021, 5:30 PM IST

Covid effect on the labor market
ಕಾರ್ಮಿಕ ಮಾರುಕಟ್ಟೆ ಮೇಲೆ ಕೋವಿಡ್​ ಪರಿಣಾಮ

ಮುಂಬೈ :ಕೋವಿಡ್​ -19 ಕಾರ್ಮಿಕ ಮಾರುಕಟ್ಟೆಯ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ. ಈ ಕಾರಣದಿಂದ 2030ರ ವೇಳೆಗೆ 18 ಮಿಲಿಯನ್ ಭಾರತೀಯರು ಹೊಸ ಉದ್ಯೋಗಕ್ಕೆ ಬದಲಾಗುತ್ತಾರೆ ಎಂದು ವರದಿಯೊಂದು ಹೇಳಿದೆ.

ಚಿಲ್ಲರೆ ವ್ಯಾಪಾರ, ಆಹಾರ ಸೇವೆಗಳು, ಹಾಸ್ಪಿಟಾಲಿಟಿ ಮತ್ತು ಕಚೇರಿ ಆಡಳಿತದಲ್ಲಿ ಕಡಿಮೆ ಕೂಲಿ ಕಾರ್ಮಿಕರ ಮೇಲೆ, ಇದು ಹೆಚ್ಚಿನ ಪ್ರಮಾಣದಲ್ಲಿ ಬೀರುತ್ತದೆ ಎಂದು ಥಿಂಕ್-ಟ್ಯಾಂಕ್ ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ ವರದಿ ಮಾಡಿದೆ.

ಕೋವಿಡ್​-19 ಕಾರ್ಮಿಕ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತದೆ. ಯಾಕೆಂದರೆ, ಕಂಪನಿಗಳು ಹೊಸ ಆಯಾಮದ ಕೆಲಸ ಮಾಡುವಂತೆ ಕಾರ್ಮಿಕರನ್ನು ಒತ್ತಾಯಿಸುತ್ತದೆ. ಭಾರತ ಸೇರಿದಂತೆ ಎಂಟು ದೇಶಗಳಲ್ಲಿ ಅಗತ್ಯವಿರುವ ಕಾರ್ಮಿಕರ ಬೇಡಿಕೆ, ಉದ್ಯೋಗಗಳ ಮಿಶ್ರಣ, ಕೆಲಸಗಾರರ ಕೌಶಲ್ಯಗಳ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ.

ಓದಿ : ಕೇವಲ ಸಮರವಲ್ಲ, ಇದು ಮಾಹಿತಿ ಸಮರ: ಭಾರತದ ವಿರುದ್ಧ ಟರ್ಕಿ, ಪಾಕ್ ಷಡ್ಯಂತ್ರ.?

ಕೋವಿಡ್​ ಪರಿಣಾಮ ಗ್ರಾಹಕರ ನಡವಳಿಕೆ ಮತ್ತು ವ್ಯವಹಾರ ಮಾದರಿಗಳಲ್ಲಿ ಬದಲಾವಣೆಗಳ ಇ-ಕಾಮರ್ಸ್ ಮತ್ತು ವರ್ಚುಯಲ್ ಸಂವಹನಗಳನ್ನು ಹೆಚ್ಚಳ ಮಾಡಿವೆ. ಯಾಂತ್ರೀಕೃತಗೊಂಡ ಮತ್ತು ಎಐ (ಕೃತಕ ಬುದ್ಧಿಮತ್ತೆ) ಯನ್ನು ಹೆಚ್ಚು ವೇಗವಾಗಿ ಬಳಸಿಕೊಳ್ಳಲಾಗ್ತಿದೆ. ಇದು ಒಂದು ದಶಕದಲ್ಲಿ ಆರ್ಥಿಕತೆಯಲ್ಲಿ ಉದ್ಯೋಗಗಳ ಪುನರ್​ ರಚನೆಗೆ ಕಾರಣವಾಗಲಿದೆ ಮತ್ತು 100 ದಶಲಕ್ಷಕ್ಕೂ ಹೆಚ್ಚು ಕಾರ್ಮಿಕರು ಹೊಸ ಉದ್ಯೋಗವನ್ನು ಹುಡುಕಬೇಕಾಗಿದೆ. ಅದರಲ್ಲಿ 18 ಮಿಲಿಯನ್ ಜನರು ಭಾರತದವರಾಗಿರುತ್ತಾರೆ ಎಂದು ವರದಿ ತಿಳಿಸಿದೆ.

ABOUT THE AUTHOR

...view details