ಕರ್ನಾಟಕ

karnataka

ETV Bharat / bharat

ಗ್ರಾಪಂ ಚುನಾವಣೆ: ಅಧ್ಯಕ್ಷ - ಉಪಾಧ್ಯಕ್ಷರಾಗಿ ಆಯ್ಕೆಯಾದ ದಂಪತಿ

ಹಿಮಾಚಲ ಪ್ರದೇಶದ ಜಿಲ್ಲಾ ಮಂಡಿಯ ಗೋಹರ್ ಬ್ಲಾಕ್‌ನ ಶಾಲಾ ಪಂಚಾಯಿತಿಯಲ್ಲಿ ಪತಿ - ಪತ್ನಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.

By

Published : Jan 18, 2021, 11:49 AM IST

ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ದಂಪತಿ
husband and wife elected on the post of president and vice president

ಮಂಡಿ / ಗೋಹರ್: ಹಿಮಾಚಲಪ್ರದೇಶದಲ್ಲಿ ನಡೆದ ಮೊದಲ ಹಂತದ ಪಂಚಾಯತ್​ ರಾಜ್ ಚುನಾವಣೆಯಲ್ಲಿ ದಂಪತಿ ಜಯಭೇರಿ ಭಾರಿಸಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.

ಹಿಮಾಚಲ ಪ್ರದೇಶದ ಜಿಲ್ಲಾ ಮಂಡಿಯ ಗೋಹರ್ ಬ್ಲಾಕ್‌ನ ಶಾಲಾ ಪಂಚಾಯಿತಿಯಲ್ಲಿ ಪತಿ - ಪತ್ನಿ ಚುನಾವಣೆಯಲ್ಲಿ ಗೆಲುವು ಪಡೆದಿದ್ದಾರೆ. ಮೀನಾಕ್ಷಿ ಎಂಬುವವರು ಅಧ್ಯಕ್ಷರಾಗಿದ್ದರೆ, ಅವರ ಪತಿ ರಾಜ್​ ಕುಮಾರ್​​ ಠಾಕೂರ್​ ಉಪ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ.

ಓದಿ: ಹರಿಯಾಣ ಕಿಸಾನ್​ ಒಕ್ಕೂಟದ​ ಅಧ್ಯಕ್ಷನ ಅಮಾನತು: ನಾಳಿನ ಸಭೆಯಿಂದಲೂ ಕಿಕ್​ಔಟ್​

ಚುನಾವಣೆಗೆ ಪತ್ನಿಯನ್ನು ನಿಲ್ಲಿಸಿದ್ದ ಪತಿ:

ರಾಜ್‌ಕುಮಾರ್ ಠಾಕೂರ್ ಅವರು ಈ ಹಿಂದೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಈ ವೇಳೆ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಈ ಬಾರಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ಮೀಸಲಾಗಿರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದರು. ಇದೀಗ ಅವರು ಗೆಲುವು ಪಡೆದಿದ್ದಾರೆ.

ಅದರಂತೆ ರಾಜ್​ ಕುಮಾರ್​ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಸಿ ವಿಜಯ ಸಾಧಿಸಿದ್ದು, ದಂಪತಿ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ABOUT THE AUTHOR

...view details