ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಮತ್ತೊಮ್ಮೆ ಕಾಶ್ಮೀರೇತರರ ಮೇಲೆ ಗುಂಡಿನ ದಾಳಿ ನಡೆದಿದೆ. ಇಂದು ಬೆಳಗ್ಗೆ ಕಾರ್ಮಿಕನ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಬಂಡಿಪೋರಾದಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ಪರಿಶೀಲನೆ ಕೈಗೊಂಡಿದ್ದಾರೆ.
ಬಂಡಿಪೋರಾ ಜಿಲ್ಲೆಯ ತೆಹಸಿಲ್ ಅಜಾಸ್‌ನ ಸದುನಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತನನ್ನು ಮೊಹಮ್ಮದ್ ಅಮ್ರೇಜ್ (19 ವರ್ಷ) ಎಂದು ಗುರುತಿಸಲಾಗಿದೆ. ಅಮ್ರೇಜ್ ಬಿಹಾರದ ಮಾಧೇಪುರ ಜಿಲ್ಲೆಯ ಬೆಸಾದ್ ಗ್ರಾಮದ ನಿವಾಸಿ. ಅವರ ತಂದೆಯ ಹೆಸರನ್ನು ಮೊಹಮ್ಮದ್ ಜಲೀಲ್ ಎಂದು ತಿಳಿದು ಬಂದಿದೆ. ಅಮ್ರೇಜ್ ಇಲ್ಲಿಗೆ ಕೆಲಸ ಮಾಡಲು ಬಂದಿದ್ದರು. ಈತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.
ಕಣಿವೆಯಲ್ಲಿ ಕಾಶ್ಮೀರೇತರರ ಹತ್ಯೆಗಳು ನಿಲ್ಲುತ್ತಿಲ್ಲ. ಏಪ್ರಿಲ್‌ನಲ್ಲಿ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕಕ್ರಾನ್ ಪ್ರದೇಶದಲ್ಲಿ ಭಯೋತ್ಪಾದಕರು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದರು. ವ್ಯಕ್ತಿಯನ್ನು ಸತೀಶ್ ಸಿಂಗ್ ರಜಪೂತ್ ಎಂದು ಗುರುತಿಸಲಾಗಿತ್ತು. ಭಯೋತ್ಪಾದಕ ಸಂಘಟನೆಯು ಸ್ಥಳೀಯರಲ್ಲದವರಿಗೆ ಕಣಿವೆಯಿಂದ ಹೊರಹೋಗುವಂತೆ ಎಚ್ಚರಿಕೆ ನೀಡಿದೆ. ಕಣಿವೆಯಿಂದ ಹೊರ ಹೋಗುವಂತೆ ಕಾಶ್ಮೀರಿ ಪಂಡಿತರಿಗೆ ಈ ಎಚ್ಚರಿಕೆ ನೀಡಲಾಗಿದೆ.
ಬ್ಯಾಂಕ್ ಮ್ಯಾನೇಜರ್ಗಳೇ ಟಾರ್ಗೆಟ್: ಕಾಶ್ಮೀರ ಕಣಿವೆಯಲ್ಲಿ ನಡೆದ ಗುರಿ ಹತ್ಯೆಗಳಿಂದ ಸರ್ಕಾರಿ ನೌಕರರು, ವಲಸೆ ಕಾರ್ಮಿಕರು ಭಯಭೀತರಾಗಿದ್ದಾರೆ. ಭಯೋತ್ಪಾದಕರು ಇಲ್ಲಿನ ಟಿವಿ ಕಲಾವಿದರು, ಬ್ಯಾಂಕ್ ಮ್ಯಾನೇಜರ್‌ಗಳನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಕಳೆದ ತಿಂಗಳುಗಳಲ್ಲಿ ನಡೆಯುತ್ತಿರುವ ಘಟನೆಗಳು ಆತಂಕವನ್ನು ಹೆಚ್ಚಿಸಿವೆ. ನಂತರ 26 ದಿನಗಳಲ್ಲಿ 10 ಗುರಿ ಹತ್ಯೆಯ ಘಟನೆಗಳು ಬೆಳಕಿಗೆ ಬಂದ ನಂತರ ಈಗ ಅಲ್ಲಿಂದ ವಲಸೆಯೂ ಪ್ರಾರಂಭವಾಗಿದೆ ಎನ್ನಲಾಗ್ತಿದೆ.
ಓದಿ:ತಂದೆ ಮೇಲಿನ ಹಲ್ಲೆಗೆ ಪ್ರತೀಕಾರ: ವ್ಯಕ್ತಿಗೆ ಗುಂಡು ಹಾರಿಸಿದ ಅಪ್ರಾಪ್ತ ಬಾಲಕ! ವಿಡಿಯೋ