ನವನ್‌ಶಹರ್(ಪಂಜಾಬ್):ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಮಾತ್ರ ಭಾಗವಹಿಸಿದ್ದರು. ಬೇರೆ ಯಾವುದೇ ರಾಜ್ಯದ ಮುಖ್ಯಮಂತ್ರಿಯಾಗಲೀ ಅಥವಾ ಅವರ ಸಂಪುಟ ಸಹೋದ್ಯೋಗಿಗಳಾಗಲೀ ಭಾಗಿಯಾಗದಿರುವುದು ಅಚ್ಚರಿ ಮೂಡಿಸಿದೆ.
ಪ್ರಮಾಣ ವಚನ ಸಮಾರಂಭದಲ್ಲಿ ಕೇವಲ 91 ಶಾಸಕರು ಮಾತ್ರ ಭಾಗಿ:ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 116 ಶಾಸಕರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಈ ಕುರ್ಚಿಗಳನ್ನು ವೇದಿಕೆಯ ಬಲಭಾಗದಲ್ಲಿ ಇರಿಸಲಾಗಿತ್ತು. ಮಧ್ಯದಲ್ಲಿ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇದಿಕೆ ಇತ್ತು. ಇದೇ ವೇಳೆ, ಬಾಹ್ಯ ಅತಿಥಿಗಳಿಗೆ ಅಥವಾ ಮುಖ್ಯ ಅತಿಥಿಗಳಿಗೆ ವೇದಿಕೆ ಸಹ ಸಿದ್ಧಪಡಿಸಲಾಗಿತ್ತು.
ಓದಿ:ನೂತನ ವಿಶ್ವಸುಂದರಿಯಾಗಿ ಹೊರಹೊಮ್ಮಿದ ಪೋಲೆಂಡ್ನ ಕರೋಲಿನಾ ಬಿಲಾವ್ಸ್ಕಾ
ಪಂಜಾಬ್ ಸರ್ಕಾರವು ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಆಹ್ವಾನ ಕಳುಹಿಸಿತ್ತು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅವರ ಐವರು ಸಚಿವರು ಮುಖ್ಯ ಅತಿಥಿಗಳ ವೇದಿಕೆಯಲ್ಲಿದ್ದರು. ಆಮ್ ಆದ್ಮಿ ಪಕ್ಷದ 91 ಶಾಸಕರು ಮಾತ್ರ ಶಾಸಕ ಸ್ಥಾನಗಳಲ್ಲಿ ಕುಳಿತಿದ್ದರು. ರಾಜ್ಯದ ಯಾವುದೇ ಕಾಂಗ್ರೆಸ್, ಎಸ್‌ಎಡಿ ಅಥವಾ ಬಿಜೆಪಿ ಶಾಸಕರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.